ಹಾಸನ : ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಹೋಗಬೇಡಿ. ಸಹಾಯ ಪಡೆಯೆದಿರೋ ಶಾಸಕರ ತಂದೆ ಬಗ್ಗೆನೆ ಮಾತನಾಡುತ್ತಾರೆ ಎಂದರೆ ಸಾಮಾನ್ಯ ನೌಕರರ ಪಾಡು ಏನಾಗಬೇಕು..? ಅಪ್ಪಿ ತಪ್ಪಿ ಅವರ ಮನ ಬಾಗಿಲಿಗೆ ಹೋಗಬೇಡಿ, ಯಾವುದು ಶಿಫಾರಸ್ಸು ತಗೋಬೇಡಿ. ನಿಮ್ಮ ಜೀವನ ನಡಿತಿರೋದೆ ಅವರಿಂದ ಅಂತಾರೆ, ಬಹಳ ಎಚ್ಚರಿಕೆಯಿಂದ ಇರಿ ಎಂದು ಪ್ರೀತಂಗೌಡ ಹೇಳಿದ್ದಾರೆ.
ಅಲ್ಲದೇ, ಸರ್ಕಾರಿ ನೌಕರರು ಬಹಳ ಸ್ವಾಭಿಮಾನಿಗಳು. ಅನಿತಕ್ಕ ಬಂದರು ಆ ಅಕ್ಕನನ್ನು ನೋಡಿದ್ರೆ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತ ಕರಿಬೇಕು ಅನ್ಸುತ್ತೆ. ತುಂಬಿದ ಕೊಡ ತುಳುಕುವುದಿಲ್ಲ, ಅನಿತಕ್ಕನ ಬಗ್ಗೆ ಮಾತನಾಡಲು ಆಗುತ್ತ..? ಅನಿತಕ್ಕ ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತ ತಲೇಲಿ ಇಟ್ಕಂಡಿದ್ದಾರೆ. ಅವರ ಮೊಮ್ಮಗ ಬರಿ ಎಂಪಿ ನಾನೇ ಮಾಜಿಪ್ರಧಾನಿ ಅನ್ನೋ ನಿಟ್ಟಿನಲ್ಲಿ ಮಾತಾಡ್ತಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.