Friday, December 5, 2025

Latest Posts

Adya Hospital ಉದ್ಘಾಟಿಸಿದ ಶಾಸಕ ಟಿ. ವೆಂಕಟರಮಣಯ್ಯ..!

- Advertisement -

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(doddaballapura)ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದ್ಯ ಹಾಸ್ಪಿಟಲ್(hospital), ಸ್ಪೆಷಾಲಿಟಿ ಸರ್ಜಿಕಲ್ ಸೆಂಟರ್(Specialty surgical center)ಅನ್ನು ಶಾಸಕ ಟಿ.ವೆಂಕಟರಮಣಯ್ಯ(T Venkataramanaiah) ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್(covid) ಮೂರನೆ ಅಲೆಯ ಆತಂಕದ ನಡುವೆ ಉದ್ಘಾಟನೆಯಾಗಿರುವ ಆದ್ಯ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಸೇವೆ, ಸೌಲಭ್ಯವನ್ನು ನೀಡಿ ತಾಲೂಕಿನ‌ಜನರ ವಿಶ್ವಾಸಗಳಿಸಲಿ, ಅಲ್ಲದೆ ಕೋವಿಡ್ ಆತಂಕ ದೂರಾಗಿಸಲು ಈ ಆಸ್ಪತ್ರೆ ಸಿಬ್ಬಂದಿಗಳು ಶ್ರಮಿಸಲಿ ಎಂದರು. ಆದ್ಯ ಆಸ್ಪತ್ರೆ ವೈದ್ಯರಾದ ಡಾ.ರಾಕೇಶ್ ಗೌಡ(Dr. Rakesh Gowda)ಮಾತನಾಡಿ, ಉನ್ನತ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ತಾಲೂಕಿನ ಜನತೆ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ತಜ್ಞ ವೈದ್ಯರ ನೇತೃತ್ವದಲ್ಲಿ ಚಿಕಿತ್ಸೆ ದೊರಕಲಿದ್ದು, ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಹಾಗೂ 10 ಹಾಸಿಗೆಗಳ ವೆಂಟಿಲೇಟರ್‌ಗಳೊಂದಿಗೆ(Ventilator) ಐಸಿಯು ವಾರ್ಡ್(Icu Ward) ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಮೂಳೆ ಮುರಿತ, ಬೆನ್ನುಮೂಳೆ, ಆರ್ಥೊಸ್ಕೋಪಿ ಮತ್ತು ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಮೀಸಲಾದ ಆರ್ಥೋಪೆಡಿಕ್ ಸರ್ಜಿಕಲ್ ಸೆಂಟರ್, ಎಲ್ಲಾ ವಿಶೇಷ ಮತ್ತು ಸೂಪರ್ ಸ್ಪೆಷಾಲಿಟಿ ಶಸ್ತ್ರಚಿಕಿತ್ಸೆಗಳು, 24×7 ಅಪಘಾತ ಮತ್ತು ತುರ್ತು ಚಿಕಿತ್ಸೆ, ಎರಡು ಸುಸಜ್ಜಿತವಾದ ಸರ್ಜಿಕಲ್ ಥಿಯೇಟರ್, ಲ್ಯಾಬೋರೇಟರಿ, ಡಿಜಿಟಲ್ ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಇತರೆ ಡಯೋಗ್ನೋಸ್ಟಿಕ್ ಸೇವೆಗಳು ದೊರೆಯಲಿದೆ ಎಂದರು‌.

- Advertisement -

Latest Posts

Don't Miss