ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..

National News: ಸದ್ಯ ಭಾರತವೆಲ್ಲ ರಾಮಮಯವಾಗಿ ಹೋಗಿದೆ. ರಾಮ ಭಕ್ತರು ಎಲ್ಲಿ ನೋಡಿದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಪ್ರಧಾನಿ ಮೋದಿ, ಯುವತಿಯೊಬ್ಬಳು ಒಂದು ವರ್ಷದ ಹಿಂದೆ, ರಾಮ ಭಜನೆ ಹಾಡಿ, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದ ವೀಡಿಯೋವನ್ನು, ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ ಎಂಬ ಹಾಡನ್ನು ಹಾಡಿದವರು ನಮ್ಮ ಕನ್ನಡದವರಲ್ಲ. ತಮಿಳುನಾಡಿನ, ಶಿವಶ್ರೀ ಸ್ಕಂದಪ್ರಸಾದ್ ಎಂಬಾಕೆ. ಆದರೆ ಈಕೆ ಕನ್ನಡದ ಈ ಹಾಡನ್ನು ಹೇಗೆ ಹಾಡಿದ್ದಾರೆಂ ಎಂದರೆ, ಇವರು ಕನ್ನಡಿಗರೇ ಇರಬೇಕು ಅನ್ನುವಷ್ಟು ಸ್ಪಷ್ಟವಾಗಿ ಈ ಹಾಡನ್ನು ಹಾಡಿದ್ದಾರೆ. ಮತ್ತು ಪ್ರಧಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ವೀಡಿಯೋ ಶೇರ್ ಮಾಡಿರುವ ಪ್ರಧಾನಿ ಮೋದಿ, ಇಂಥ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ, ಮುಂದೆ ಕೊಂಡೊಯ್ಯಲು ಸಹಕರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಪ್ರಧಾನಿ ಮೋದಿ ಈ ವೀಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ, ಕರ್ನಾಟಕದ ಬಿಜೆಪಿ ನಾಯಕರು ತಮ್ಮ ಟ್ವಿಟರ್‌ನಲ್ಲಿ ಪ್ರಧಾನಿಗಳ ಪೋಸ್ಟ್‌ ಶೇರ್ ಮಾಡಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ, ತೆರೆಯೋ ಬಾಗಿಲನು ರಾಮಾ ಎಂಬ ಹಾಡು ಕೇಳುತ್ತಿದ್ದಂತೆ, ಭಕ್ತಿಪರವಶರಾದ ನಟಿ ಸರಿತಾ ಅವರ ನಟನೆ, ಈ ಹಾಡಿನ ಗಾಯಕಿ ಎಸ್. ಜಾನಕಿಯಮ್ಮನವರೇ ಕಣ್ಮುಂದೆ ಬರುತ್ತಾರೆ. ಡಾ.ರಾಜಕುಮಾರ್‌ ನಟನೆಯ ಎರಡು ಕನಸು ಸಿನಿಮಾದ ಹಾಡು ಇದಾಗಿದ್ದು, ಅಂದಿನ ಕಾಲದ ರಾಮ ಭಜನೆ ಈಗಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು, ದೊರೈ-ಭಗವಾನ್ ಅವರ ಮ್ಯಾಜಿಕ್ ಅಂತಾನೇ ಹೇಳಬಹುದು.

ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’

About The Author