Monday, October 2, 2023

Latest Posts

2047ರವರೆಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತ- ರಾಮ್ ಮಾಧವ್ ಭವಿಷ್ಯ

- Advertisement -

ತ್ರಿಪುರಾ: 2047ರ ಸ್ವಾತಂತ್ರ್ಯ ಶತಮಾನೋತ್ಸವದವರೆಗೂ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ.

ತ್ರಿಪುರಾದಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸ್ವತಂತ್ರ್ಯ ಬಂದ ನಂತರದಲ್ಲಿ , ಅಂದರೆ 1950ಯಿಂದ 1977 ವರೆಗೂ ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ದಾಖಲೆ ಕಾಂಗ್ರೆಸ್ ಪಕ್ಷದ್ದು. ಆದರೆ ಕಾಂಗ್ರೆಸ್ ಪಕ್ಷ ಈ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಮುರಿಯಲಿದ್ದಾರೆ. 2047ರ ಸ್ವತಂತ್ರ್ಯ ಶತಮಾನೋತ್ಸವ ಆಚರಣೆ ವರೆಗೂ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿರುತ್ತೆ. ಭಾರತ ವಿಶ್ವಗುರುವಾಗಿ ಹೊರಹೊಮ್ಮಲಿದೆ ಅಂತ ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಅಂದ್ರೆ ರಾಷ್ಟ್ರೀಯತೆ, ರಾಷ್ಟ್ರೀಯತೆ ಅಂದ್ರೆ ಬಿಜೆಪಿ. ಈ ಮಾತು ಕೇವಲ ಚುನಾವಣೆ ಮಾತ್ರ ಸೀಮಿತವಾಗಿಲ್ಲ ಅಂತ ಪ್ರತಿಕ್ರಿಯಿಸೋ ಮೂಲಕ ಟೀಕೆ ಮಾಡುತ್ತಿದ್ದ ವಿರೋಧಿಗಳಿಗೆ ರಾಮ್ ಮಾಧವ್ ಟಾಂಗ್ ನೀಡಿದ್ದಾರೆ.

ಅಲ್ಲದೆ ನರೇಂದ್ರ ಮೋದಿ ಈ ದೇಶದ ವರ್ತಮಾನವಾಗಿದ್ದಾರೆ ಹಾಗೂ ಅವರೇ ಈ ದೇಶದ ಭವಿಷ್ಯ. 2022ರೊಳಗೆ ಈ ದೇಶದಲ್ಲಿ ಸೂರಿಲ್ಲದವರು, ನಿರುದ್ಯೋಗಿಗಳು ಇರಲು ಸಾಧ್ಯವೇ ಇಲ್ಲ. ಅವರೆಲ್ಲರ ಸಮಸ್ಯೆಯನ್ನೂ ಮೋದಿ ಹೋಗಲಾಡಿಸಲಿದ್ದಾರೆ ಅಂತ ರಾಮ್ ಮಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧೋನಿ ಗ್ಲೌಸ್ ಮೇಲೆ ಪಾಕ್ ಗೆ ಯಾಕೆ ಉರಿ…? ತಪ್ಪದೇ ಈ ವಿಡಿಯೋ ನೋಡಿ

https://www.youtube.com/watch?v=7GA6AcpEo08
- Advertisement -

Latest Posts

Don't Miss