Friday, October 18, 2024

Latest Posts

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಮೊಹಮ್ಮದ್ ಶಮಿ

- Advertisement -

Sports news: ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಅನುಭವಿ ವೇಗಿ ಮೊಹಮ್ಮದ್ ಶಮ್ಮಿ ಅವರು, ಪಂದ್ಯದಿಂದ ಪಂದ್ಯಕ್ಕೆ ತಮ್ಮ ಘಾತಕ ಬೌಲಿಂಗ್ ದಾಳಿ ಮೂಲಕ ವಿಕೆಟ್ ಕಿತ್ತು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಗುರುವಾರ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಂಕಾ ವಿರುದ್ಧದ ಪಂದ್ಯದಲ್ಲಿಯೂ 5 ವಿಕೆಟ್ ಕಿತ್ತು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಲಂಕಾ ವಿರುದ್ಧದ ಪಂದ್ಯದಲ್ಲಿ 5 ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ ಕೇವಲ 18 ನೀಡಿ 5 ವಿಕೆಟ್ ಉಡಾಯಿಸಿದರು. ಇದರಲ್ಲಿ ಒಂದು ಮೇಡನ್ ಕೂಡ ಒಳಗೊಂಡಿತ್ತು. ಈ ವಿಕೆಟ್ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತ ಪರ ವಿಶ್ವಕಪ್ಕಪ್ನಲ್ಲಿ ಅತ್ಯಧಿಕ ವಿಕೇಟ್
33 ವರ್ಷದ ಶಮಿ ಅವರು ಲಂಕಾ ವಿರುದ್ಧ 5 ವಿಕೆಟ್ ಕೀಳುವ ಮೂಲಕ ಭಾರತ ಪರ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೇಟ್ ಕಿತ್ತ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿತ್ತು. ಜಹೀರ್ ಮತ್ತು ಶ್ರೀನಾಥ್ ತಲಾ 44 ವಿಕೆಟ್ ಪಡೆದಿದ್ದರು. ಆದರೆ ಈಗ ಶಮಿ 45* ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. 33 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೂ ಜಹೀರ್ ಮತ್ತು ಶ್ರೀನಾಥ್ ದಾಖಲೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಬುಮ್ರಾಗೆ ಇನ್ನು 12 ವಿಕೆಟ್ ಬೇಕಿದೆ.

ಮೊಹಮ್ಮದ್ ಶಮಿ: 45 ವಿಕೆಟ್

ಜಹೀರ್ ಖಾನ್: 44 ವಿಕೆಟ್

ಜಾವಗಲ್ ಶ್ರೀನಾಥ್: 44 ವಿಕೆಟ್

ಜಸ್ಪ್ರೀತ್ ಬುಮ್ರಾ: 33 ವಿಕೆಟ್

ಅನಿಲ್ ಕುಂಬ್ಳೆ: 31 ವಿಕೆಟ್

ಒಂದೇ ಆವೃತ್ತಿಯಲ್ಲಿ 4 ಪ್ಲಸ್ ವಿಕೆಟ್ ಸಾಧನೆ
ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಗರಿಷ್ಠ 4 ಪ್ಲಸ್ ವಿಕೆಟ್ ಗೊಂಚಲು ಪಡೆದ ಸಾಧಕರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ 3ನೇ ಸ್ಥಾನಕ್ಕೇರಿದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ 3 ಬಾರಿ 4 ಪ್ಲಸ್ ವಿಕೆಟ್ ಕಬಳಿಸಿದ್ದರು. ಈ ಬಾರಿ 3 ಬಾರಿ 4 ಪ್ಲಸ್ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಶಾಹಿದ್ ಆಫ್ರಿದಿ(2011) 4 ಬಾರಿ ಈ ಸಾಧನೆ ಮಾಡಿದ್ದಾರೆ.

ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಯತ್ತ ಚಿತ್ತ‌ಹರಿಸಿದ ಕಾಂಗ್ರೆಸ ‌ಶಾಸಕ

‘ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ’

‘ಆ ನಾಲ್ಕು ಜನರ ನಡುವೆ ಜಗಳ ಹಚ್ಚಿ, ಸಿದ್ದರಾಮಯ್ಯ ಸಿಎಂ ಆಗಿರಬೇಕು ಅಂದುಕೊಂಡಿದ್ದಾರೆ’

- Advertisement -

Latest Posts

Don't Miss