Saturday, July 20, 2024

Latest Posts

ಈ ಮಾವಿನ ರೇಟ್ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

- Advertisement -

ಎಲ್ಲರೂ ತುಂಬಾ ಇಷ್ಟ ಪಡುವ, ಬೇಸಿಗೆಯಲ್ಲಿ ಸಿಗುವ ರುಚಿಯಾದ, ರಸಭರಿತ ಹಣ್ಣು ಅಂದ್ರೆ ಮಾವಿನ ಹಣ್ಣು. ನನಗೆ ಮಾವಿನ ಹಣ್ಣು ಅಂದ್ರೆ ಇಷ್ಟಾನೇ ಆಗಲ್ಲಾ ಅಂತಾ ಹೇಳೋರರನ್ನ ನಾವು ನೋಡಿರೋಕ್ಕೆ ಸಾಧ್ಯಾನೇ ಇಲ್ಲಾ.. ಅಷ್ಟು ಸ್ವಾದಿಷ್ಟ ಹಣ್ಣು ಈ ಮಾವಿನ ಹಣ್ಣು. ಬೇಸಿಗೆಯಲ್ಲಿ ಮೊದಲಿಗೆ ಸ್ವಲ್ಪ ಕಾಸ್ಟ್ಲಿಯಾಗಿದ್ದ ಹಣ್ಣು ನಂತರದ ದಿನಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ನಮಗೆ ಸಿಗತ್ತೆ. ಆದ್ರೆ ಬೆಳ್ಳಿ ಬಂಗಾರಕ್ಕಿಂತಲೂ ಹೆಚ್ಚು ರೇಟಿನ ಮಾವಿನ ಹಣ್ಣಿನ ಬಗ್ಗೆ ನೀವು ಕೇಳಿದ್ದೀರಾ..? ಇದನ್ನ ಬೆಳಿಯುವವರು ಅದರ ಸುರಕ್ಷತೆಗಾಗಿ ಏನೇನು ಮಾಡ್ತಾರೆ ಗೊತ್ತಾ..? ಈ ಎಲ್ಲ ವಿಷಯದ ಬಗ್ಗೆ ತಿಳಿಯೋಣ ಬನ್ನಿ..

ನೇರಳೆ ಬಣ್ಣದ ಈ ಮಾವಿನ ಹಣ್ಣಿನ ಹೆಸರು ತಮಾಗೋ. ಈ ಹಣ್ಣನ್ನ ಜಾಪನೀಸ್ ಮ್ಯಾಂಗೋ ಅಂತಾನೂ ಕರೀತಾರೆ. ಜಪಾನಲ್ಲಷ್ಟೇ ಕಾಣ ಸಿಗುತ್ತಿದ್ದ ಈ ಮಾವಿನ ಹಣ್ಣಿನ ಮರ ಈಗ ಮಧ್ಯ ಪ್ರದೇಶದ ಒಂದು ಸ್ಥಳದಲ್ಲಿಯೂ ಕಾಣ ಸಿಗುತ್ತದೆ. ಈ ಮಾವಿನ ಹಣ್ಣಿನ ತೋಟ ಕಾಯಲು ನಾಯಿಯನ್ನು ಕಾವಲಾಗಿ ಇಡಲಾಗತ್ತೆ.

ಇಲ್ಲಿ ಕಳ್ಳ ಕಾಕರಷ್ಟೇ ಅಲ್ಲ, ಅಪರಿಚಿತರೂ ಸುಳಿಯುವ ಹಾಗಿಲ್ಲ. ಅದಕ್ಕಾಗಿ ಕಾವಲು ಕಾಯಲು ಗಾರ್ಡ್‌ ಡಾಗ್ಸ್ ಇಡಲಾಗತ್ತೆ. ಸಾಮಾನ್ಯವಾಗಿ ಫಿಲ್ಮ್ ಸ್ಟಾರ್ಸ್, ರಾಜಕೀಯ ಗಣ್ಯರ ಮನೆ ಕಾವಲಿಗೆ ಇಂಥ ನಾಯಿಯನ್ನ ಇಡಲಾಗತ್ತೆ. ಅಂಥ ನಾಯಿಯನ್ನ ಈ ಮಾವಿನ ತೋಟಕ್ಕೆ ರಕ್ಷಣೆಗಾಗಿ ಇಡ್ತಾರೆ. ಅದೂ ಒಂದು ಎರಡು ನಾಯಿ ಅಲ್ಲ. 9ರಿಂದ 10 ನಾಯಿಯನ್ನ ಇಲ್ಲಿ ಕಾವಲಿಡಲಾಗತ್ತೆ ಅಂದ್ರೆ ಈ ಮಾವಿನ ಹಣ್ಣು ಎಷ್ಟು ಕಾಸ್ಟ್ಲಿ ಅಂತಾ ನೀವು ಅಂದಾಜು ಮಾಡಬಹುದು.

ಇನ್ನು ಈ ಹಣ್ಣನ್ನ ಯಾವುದಾದರೂ ಪಕ್ಷಿ ಅಥವಾ ಮಂಗಗಳು ಬಂದು ತಿನ್ನಬಹುದು ಅನ್ನೋ ಕಾರಣಕ್ಕೆ ಇಲ್ಲಿ ಬೆಳೆಯುವ ಪ್ರತೀ ಹಣ್ಣಿಗೂ ಪ್ಲಾಸ್ಟಿಕ್‌ ಸುತ್ತಲಾಗತ್ತೆ. ಇನ್ನು ಇಷ್ಟೆಲ್ಲಾ ರಕ್ಷಣೆ ಮಾಡಿ ಬೆಳೆಯುವ ಈ ಹಣ್ಣಿನ ಬೆಲೆ ಎಷ್ಟು ಅಂತಾ ನೋಡೋದಾದ್ರೆ, ಒಂದು ತಮಾಗೋ ಮಾವಿನ ಹಣ್ಣಿನ ಬೆಲೆ ಎರಡುವರೆ  ಲಕ್ಷ. ಅಂದ್ರೆ ನಾಲ್ಕು ಮಾವಿನ ಹಣ್ಣಿನ ಬೆಲೆ 10 ಲಕ್ಷ. ಇನ್ನು ಯಾಕೆ ಈ ಹಣ್ಣಿನ ಬೆಲೆ ಇಷ್ಟು ಹೆಚ್ಚು ಅಂದ್ರೆ, ಬೇರೆ ಹಣ್ಣಿಗಿಂತ ಈ ಹಣ್ಣು ಹೆಚ್ಚು ಆರೋಗ್ಯಕರವಂತೆ. ಅದಕ್ಕಾಗಿ ಈ ಹಣ್ಣು ಕಾಸ್ಟ್ಲಿ ಅಂತಾ ಹೇಳಲಾಗುತ್ತದೆ.

- Advertisement -

Latest Posts

Don't Miss