- Advertisement -
ಬೆಳಗಾವಿ: ಗೋಡೆ ಕುಸಿದು 7 ಜನರ ದಾರುಣವಾಗಿ ಸಾವನಪ್ಪಿದ ಹಿನ್ನೆಲೆಯಲ್ಲಿ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಕ್ಕೆ ಸಂಸದೆ ಮಂಗಲಾ ಅಂಗಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇಂತಹ ದುರ್ಘಟನೆ ನಡೆಯಬಾರದಿತ್ತು, ನಿಜಕ್ಕೂ ಇದು ಸಹಿಸಲಾರದ ಘಟನೆ ಅಂತ ವಿಷಾದ ವ್ಯಕ್ತಪಡಿಸಿದ ಮಂಗಳಾ ಅಂಗಡಿ, ಮೃತರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ಹೊಸ ಮನೆ ನಿರ್ಮಾಣಕ್ಕೆ ಸಿಎಂ ಅವರಿಗೆ ಮನವಿ ಮಾಡುತ್ತೇನೆ ಅಂತ ಭರವಸೆ ನೀಡಿದ್ರು.
ಈಗಾಗಲೇ ಸಿಎಂ ಬೊಮ್ಮಾಯಿ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಆದಷ್ಟು ಬೇಗ ಕುಟುಂಬಸ್ಥರ ಕೈಸೇರುವಂತೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುತ್ತೆ ಅಂತ ಸಂಸದೆ ಮಂಗಳಾ ಅಂಗಡಿ ತಿಳಿಸಿದ್ರು.
ಕರ್ನಾಟಕ ಟಿವಿ, ಬೆಳಗಾವಿ
- Advertisement -