Kolar News: ಕೋಲಾರ : ಕೋಲಾರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರ್ನಾಟಕ ಕೇಸರಿ ಜಗನ್ನಾಥ್ ರಾವ್ ಜೋಶಿ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿಜೆಪಿ ಸಂಸದ ಎಸ್ ಮುನಿಸ್ವಾಮಿ , ಮತ್ತು ಗಣ್ಯರು ಪುಸ್ತಕ ಬಿಡುಗಡೆ ಮಾಡಿದ್ದು, ಪರಿವಾರದ ಹಿರಿಯ ಕಾರ್ಯಕರ್ತರಾದ ತಿಮ್ಮಣ್ಣ ಭಟ್ ಈ ಪುಸ್ತಕವನ್ನು ಬರೆದಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಮಾತನಾಡಿದ ಮುನಿಸ್ವಾಮಿ, ಅಕ್ಕಿ ಬದಲಾಗಿ ಹಣ ನೀಡುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ರು, ಈಗಲೂ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ತುಂಬಾ ಬುದ್ದಿವಂತರು ಎಂದು ನಾನು ತಿಳಿದಿದ್ದೆ. ಕಾಂಗ್ರೆಸ್‌ನ ಪ್ರಣಾಳಿಕೆಗಳನ್ನ ಕಾಂಗ್ರೆಸ್ ಮಾಡಬೇಕು, ಬಿಜೆಪಿ ಅವರು ಅಲ್ಲ. ಸೋನಿಯಾ ಗಾಂಧಿ , ರಾಹುಲ್ ಗಾಂಧಿ, ಸುರ್ಜೇವಾಲಾ ಅವರನ್ನ ಕೇಳಿ ಮಾತು ಕೊಟ್ಟಿದ್ದು, ಅವರನ್ನ ಹೋಗಿ ಕೇಳಬೇಕು. ಮೋದಿ ಅವರನ್ನ ಕೇಳುವುದು ಅಲ್ಲ, ಮೋದಿ ಅವರನ್ನ ಕೇಳಿ ಮಾತು ಕೊಟ್ಟಿಲ್ಲ ಎಂದು ಮುನಿಸ್ವಾಮಿ ಹೇಳಿದ್ದಾರೆ.
ಅಲ್ಲದೇ, ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯಗಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಅವರ ಮೇಲೆ ಗೂಬೆ ಕೂರಿಸಿ ಇವರ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. 340 ರೂಪಾಯಿ ಹಾಕಬೇಕು 170 ರೂಪಾಯಿ ಅಲ್ಲ. ಅದು ಕೊಡೊವರೆಗು ನಾವು ಬಿಡೋಲ್ಲ. ತಮಿಳುನಾಡು, ಆಂದ್ರ ಸೇರಿದಂತೆ ಕೆಲ ಸರ್ಕಾರಗಳು ಉಚಿತ ಎಂದು ಕೊಟ್ಟು ಅಧೋಗತಿಗೆ ಹೋಗಿದೆ. ನಿಮ್ಮ ಆಸ್ತಿ ಎಷ್ಟಿತ್ತೊ ಅಷ್ಟೆ ಕಾಲು ಚಾಚಬೇಕಿತ್ತು ಎಂದು ಮುನಿಸ್ವಾಮಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು 40% ಕಮಿಷನ್ ತನಿಖೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುನಿಸ್ವಾಮಿ, ಕಾಂಗ್ರೆಸ್ ಸರ್ಕಾರ ಇದ್ದಾಗ ವಾಚ್ ಕೊಟ್ಟದ್ದು, ವಿಧಾನ ಸೌಧದಲ್ಲಿ ಹಣ ಸಿಕ್ಕಿದ್ದು, ಅರ್ಕಾವತಿ ಹಗರಣ ಎಲ್ಲವನ್ನ ತನಿಖೆ ಮಾಡಲಿ. ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೇಸ್ ಪಕ್ಷ. 60% ಕಮಿಷನ್ ಕಾಂಗ್ರೆಸ್ ಆಗಿದೆ ಎಂದು ಕಾಂಟ್ರಾಕ್ಟರ್ ಗಳೇ ಹೇಳುತ್ತಿದ್ದಾರೆ. 60% ಕಮಿಷನ್ ತೆಗೆದುಕೊಳ್ಳೋದಕ್ಕೆ ಸುರ್ಜೇವಾಲ ಕರೆದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ ಎಂದು ಮುನಿಸ್ವಾಮಿ ಹೇಳಿದ್ದಾರೆ.
ಕಾಂಗ್ರೇಸ್ ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಹೆಚ್ಡಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಸಂಸದರು, ಕೋಲಾರದಲ್ಲಿ ನಿಷ್ಟಾವಂತರಾಗಿ ಡೀಸಿ, ಸಿಇಓ ಕೆಲಸ ಮಾಡ್ತಿದ್ರು. ಅವರೆಲ್ಲರನ್ನ ವರ್ಗಾವಣೆ ಮಾಡಿದ್ದಾರೆ. ಒಂದು ಸ್ಥಾನಕ್ಕೆ ನಾಲ್ಕು ಜನರ ಹೆಸರನ್ನ ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ಪೋಸ್ಟಿಂಗ್ ಗೆ ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲೂ ವರ್ಗಾವಣೆ ಮಾಡಿ ಅವರಿಂದ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೇಸ್ ಸರ್ಕಾರಕ್ಕೆ ಆಯುಷ್ಯ ಇಲ್ಲ, ಜನ ಕಾಂಗ್ರೇಸ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಸಂಸದರು ಹೇಳಿದ್ದಾರೆ.
ಒಂದು ದೇಶ ಒಂದು ಕಾನೂನು ವಿಚಾರದ ಬಗ್ಗೆ ಮುನಿಸ್ವಾಮಿ ಪ್ರತಿಕ್ರಿಯಿಸಿದ್ದು, ಇಸ್ಲಾಮಿಕ್ ಸಂಘಟನೆಯನ್ನ ಹಾಗೂ ಕಾಂಗ್ರೆಸ್ ಪಕ್ಷವನ್ನ ಕೇಳಿಕೊಂಡು ಕಾನೂನು ತರುವ ಸ್ಥಿತಿಯಲ್ಲಿ ನಾವಿಲ್ಲ. ದೇಶಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಅವರವರ ಪ್ರತಿಕ್ರಿಯೆ ತಿಳಿಸಿ ಎಂದು ಮೋದಿ ಹೇಳಿದ್ದಾರೆ. ಅವರವರ ಅನಿಸಿಕೆಗಳನ್ನ ತಿಳಿಸುವುದಕ್ಕೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಸಲಹೆಗಳನ್ನ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಕಾಂಗ್ರೇಸ್ ಪಕ್ಷ, ಇಸ್ಲಾಮಿಕ್ ಸಂಘಟನೆಗಳನ್ನ ಕೇಳುವಂತಹ ಪರಿಸ್ಥಿತಿ ನಮಗೆ ಇಲ್ಲಎಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
‘ಪ್ರವಾಸಕ್ಕೆ ಹೋಗಿರೋ ನನ್ನ ಹೆಂಡ್ತಿ ಇನ್ನೂ ಬಂದಿಲ್ಲಾ, ನಾನ್ ಸಾಯ್ಬೇಕು’
ಹುಬ್ಬಳ್ಳಿ ಧಾರವಾಡ ನೂತನ ಕಮಿಷನರ್ ಆಗಿ ಸಂತೋಷ್ ಬಾಬು ಪ್ರಭಾರಿಯಾಗಿ ನೇಮಕ
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ