Sunday, September 15, 2024

Latest Posts

ಸಿಎಂ ರಾಜೀನಾಮೆ ನೀಡಿದ್ರೆ ಗೌರವ ಬರುತ್ತೆ- ಶೋಭಾ ಕರಂದ್ಲಾಜೆ

- Advertisement -

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಷ್ಟೆಲ್ಲಾ ಬಿಕ್ಕಟ್ಟು ಎದುರಾಗಿರೋ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ಒತ್ತಾಯಿಸುತ್ತಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಬಹುಮತ ಕಳೆದುಕೊಂಡಿದ್ದಾರೆ. ಹೀಗಾಗಿ ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋದರೆ ಗೌರವ ಬರುತ್ತದೆ ಎಂದರು.

ಇನ್ನು ಅತೃಪ್ತ ಶಾಸಕರ ಕುರಿತು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಧಿಕಾರದಲ್ಲಿದ್ದಾಗ ಶಾಸಕರ ಭೇಟಿಗೆ ಸಿಎಂ ಅವಕಾಶ ನೀಡಲಿಲ್ಲ. ಅವರನ್ನು ಭೇಟಿ ಯಾಗದೆ ಕುಮಾರಸ್ವಾಮಿ ದರ್ಪ ತೋರಿದ್ದರು. ಆದರೆ ಈಗ, ತಮ್ಮ ಸರ್ಕಾರ ಉಳಿಸಿಕೊಳ್ಳೋದಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿ ಮುಂಬೈನಲ್ಲಿರೋ ಶಾಸಕರ ಭೇಟಿಗೆ ಗೋಗರೀತಿದ್ದಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಆಡಳಿತ ನಡೆಸಲು ಮೈತ್ರಿ ಸರ್ಕಾರಕ್ಕೆ ಯಾವುದೇ ನೈತಿಕತೆಯಿಲ್ಲ ಅಂತ ಇದೇ ವೇಳೆ ಹೇಳಿದ ಶೋಭಾ, ಸಿಎಂ ರಾಜೀನಾಮೆ ನೀಡಬೇಕು ಅಂತ ಮತ್ತೆ ಹೇಳಿದ್ರು.

ಕರ್ನಾಟಕ ಬಿಕ್ಕಟ್ಟು- ಭಗವಂತನ ಕೃಪೆ ಯಾರ ಮೇಲೆ…?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=SiBJcnB0u7c
- Advertisement -

Latest Posts

Don't Miss