ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಂಡ್ಯಕ್ಕೆ ಆಗಮಿಸಿದ್ದು, ರೈಲ್ವೆ ಸೇತುವೆ ನಿರ್ಮಾಣಕ್ಕೆ ಸ್ಥಳಾವಕಾಶದ ಅವಶ್ಯಕತೆ ಇರುವ ಹಿನ್ನೆಲೆ, ಸುಮಲತಾ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮಂಡ್ಯ ಮಹಾವೀರ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದು, ಸಂಪರ್ಕ ರಸ್ತೆಗೆ ಅಡ್ಡಲಾಗಿ ರೈಲ್ವೆ ಹಳಿಗಳಿದೆ. ರೈಲ್ವೆ ಸೇತುವೆ LC73 ನಿರ್ಮಾಣ ಕಾಮಗಾರಿಗೆ ಸ್ಥಳದ ಅವಶ್ಯಕತೆ ಹಿನ್ನಲೆ. ಸಂಸದೆ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ.
ಶಾಸಕ ಎಮ್ ಪಿ ರೇಣುಕಾಚಾರ್ಯರ ಅಣ್ಣನ ಮಗ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ತುಂಗಾ ಕಾಲುವೆಯಲ್ಲಿ ಕಾರು ಪತ್ತೆ
ಈ ವೇಳೆ ಸಿ.ಎಸ್. ಪುಟ್ಟರಾಜು ಬಗ್ಗೆ ಸುಮಲತಾ ವ್ಯಂಗ್ಯವಾಡಿದ್ದು, ಜೆಡಿಎಸ್ ಶಾಸಕರನ್ನ ಥ್ರೆಟ್ ಮಾಡೋದು ಬಿಟ್ರೆ ಬೇರೆ ಏನು ಕಾರ್ಯಕ್ರಮ ಕೊಟ್ಟಿಲ್ಲ ಎಂದು ಶಾಸಕ ಪುಟ್ಟರಾಜು ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಸ್ ಪುಟ್ಟರಾಜುಗೆ ಫ್ರೀ ಪಬ್ಲಿಸಿಟಿ ಕೊಡಲ್ಲ’. ಇನೇನು ಎಲೆಕ್ಷನ್ ಬಂತು ನನ್ನಿಂದ ಪಬ್ಲಿಸಿಟಿ ಬೇಕು ಅನ್ಸುತ್ತೆ. ನಾನು ಯಾಕೆ ಫ್ರೀ ಪಬ್ಲಿಸಿಟಿ ಕೊಡ್ಲಿ.? ಅವರು ಏನು ಬೇಕಾದ್ರು ಮಾತನಾಡಿಕೊಳ್ಳಿ ನಾನು ರಿಪ್ಲೆ ಮಾಡಲ್ಲ ಎಂದು ಸುಮಲತಾ ಹೇಳಿದ್ದಾರೆ.
ಹಿರಣ್ಯಾಕ್ಷನ ಸಂಹಾರಕ್ಕೆ ಮಹಾವಿಷ್ಣುವಿನ ವರಾಹ ಅವತಾರ …!
ರೈಲ್ವೆ ಸೇತುವೆ ನಿರ್ಮಾಣಕ್ಕೆ ಹಲವು ದಿನಗಳಿಂದ ಹೋರಾಟ ನಡೆಯುತ್ತಿತ್ತು. ರೈಲ್ವೆ ಸಚಿವರ ಜೊತೆ ಕೂಡ ಮಾತನಾಡಿ ಮನವಿ ಸಲ್ಲಿಸಿದೆ. ಇಲ್ಲಿ RUB ಯಲ್ಲಿ ಕಾಮಗಾರಿ ನಡೆಯಲು ಮನವಿ ಮಾಡಿದ್ದೇನೆ. ವರ್ತಕರು ಬೇಡಿಕೆಯು ಸಹ ಹಾಗಿದೆ. ದಿನನಿತ್ಯ 3 ಸಾವಿರ ಜನ ಕ್ರಾಸ್ ಮಾಡ್ತಾರೆ. ಟ್ರಾಫಿಕ್ ಸಮಸ್ಯೆ ಎದುರಾಗಿದೆ. ತಕ್ಷಣವೇ ಈ ಕಾರ್ಯ ಆಗಲಿದೆ ಎಂದು ಸುಮಲತಾ ಹೇಳಿದ್ದಾರೆ.