ಬೆಂಗಳೂರು: ಬೆಂಗಳೂರಿನ ಪ್ರೆಸ್ ಕ್ಲಬ್ ಅವರಣದಲ್ಲಿ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ ಅಸ್ತಿತ್ವಕ್ಕೆ ಬಂದಿದ್ದು, ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಿಡಿಯ ಮಾಸ್ಟರ್ ಮುಖ್ಯಸ್ಥರಾದ ಎಂ ಎಸ್ ರಾಘವೇಂದ್ರ ಅವರು ಆಯ್ಕೆಯಾಗಿದ್ದಾರೆ. ಈ ನಂತರ ಮಾತನಾಡಿದ ಅವರು ಬದಲಾವಣೆ ಜಗದ ನಿಯಮ ಪ್ರತಿ ಹತ್ತು ವರ್ಷಕ್ಕೆ ಒಂದು ಸಾರಿ ಬದಲಾವಣೆಯಾಗುತ್ತಿರುತ್ತದೆ. ಆರಂಭದಲ್ಲಿನ ಪ್ರಿಂಟ್ ಮೀಡಿಯಾ,ಎಲೆಕ್ಟ್ರಾನಿಕ್ ಮೀಡಿಯಾ ಗಳನ್ನು ದಾಟಿ ಡಿಜಿಟಲ್ ಮೀಡಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಂದಿದೆ. ಬೇರೆ ಮೀಡಿಯಾ ಗಳಿಗಿಂತ ಅತಿವೇಗವಾಗಿ ಸುದ್ದಿ ತಲುಪಿಸುವಲ್ಲಿ ಡಿಜಿಟಲ್ ಮೀಡಿಯಾ ಪ್ರಮುಖವಾದ ಕಾರ್ಯನಿರ್ವಹಿಸುತ್ತದೆ. ಯಾವ ಕ್ಷೇತ್ರಗಳಲ್ಲಿ ಪ್ರಿಂಟ್ ಮೀಡಿಯಾ ಎಲೆಕ್ಟ್ರಾನಿಕ್ ಮೀಡಿಯಾದ ಪ್ರಭಾವವಿಲ್ಲವೋ ಅಂತಹ ಕ್ಷೇತ್ರಗಳಲ್ಲಿ ಡಿಜಿಟಲ್ ಮೀಡಿಯಾ ದೊಡ್ಡ ಪ್ರಮಾಣದ ಬೆಳಕು ಚೆಲ್ಲುತ್ತಿದೆ. ಡಿಜಿಟಲ್ ಮೀಡಿಯಾ ಜನರಿಗೆ ಬಹಳ ಬೇಗ ಹತ್ತಿರವಾಗುತ್ತಿದೆ . ಡಿಜಿಟಲ್ ಮೀಡಿಯಾದ ವೃತ್ತಿಪರರಾಗಿ ತೊಡಗಿಸಿಕೊಂಡಿರುವ ಅವರನ್ನು ಸಂಘಟಿಸುವ ಪ್ರಯತ್ನ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಆಗುತ್ತಿದೆ ಇದರ ನಿಟ್ಟಿನಲ್ಲಿ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಹಾಗೂ ಇಲ್ಲಿನ ವೃತ್ತಿಪರರು ಎದುರಿಸುತ್ತಿರುವ ಕುಂದುಕೊರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕಾಗುವ ಅಗತ್ಯ ಇದೆ ಆ ನಿಟ್ಟಿನಲ್ಲಿ. ಕೆ.ಎಸ್. ಡಿ ಎಂ. ಎಫ್ ಅಸ್ತಿತ್ವಕ್ಕೆ ಬಂದಿದೆ. ಇನ್ನಷ್ಟು ಜನರನ್ನು ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತದೆ ಎಂದು ಹೇಳಿದರು.