- Advertisement -
ಬೆಂಗಳೂರು ಗ್ರಾಮಂತರ : ಎಮ್‌ಎಸ್‌ಜಿಪಿ ತ್ಯಾಜ್ಯ ಘಟಕ ತೆರವು ಹೋರಾಟ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಮ್.ಟಿ.ಬಿ.ನಾಗರಾಜ್ ಅವರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು.
ಆದರೆ ರೈತರು ಎಮ್‌ಎಸ್‌ಜಿಪಿ ತ್ಯಾಜ ಘಟಕವನ್ನು ತೆರವು ಮಾಡುವ ಲಿಖಿತ ದಾಖಲೆ ನೀಡಿದರೆ ಮಾತ್ರ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ ಎಂದು
ಹೋರಾಟವನ್ನು ಮುಂದುವರಿಸಿದ್ದಾರೆ.
ಈಗಾಗಲೇ 4 ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಉಸ್ತುವಾರಿ ಸಚಿವರಾದ ಎಮ್.ಟಿ.ಬಿ ನಾಗರಾಜು ಮುಂದೆಯೇ ಚುನಾವಣೆಯ ಬಹಿಷ್ಕಾರವನ್ನು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಎಮ್.ಟಿ.ಬಿ ನಾಗರಾಜು ಸರ್ಕಾರದ ಗಮನಕ್ಕೆ ತಂದು ಚರ್ಚೆಮಾಡಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ಪ್ರತಿಕ್ರಿಯೆ ನೀಡಿದರು.
- Advertisement -

