ದಾರಿಮಧ್ಯೆ ಕೈಕೊಟ್ಟ ಇಂಜಿನ್- ವಿಮಾನ ತುರ್ತು ಭೂಸ್ಪರ್ಶ- 205 ಮಂದಿ ಪ್ರಯಾಣಿಕರು ಸೇಫ್..!

ಮುಂಬೈ: ಇಂಜಿನ್ ವಿಫಲವಾದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಪೈಲಟ್ ನ ಸಮಯ ಪ್ರಜ್ಞೆಯಿಂದ 205 ಮಂದಿ ಪ್ರಯಾಣಿಕರ ಜೀವ ಉಳಿದಿದೆ.

ಮುಂಬೈನಿಂದ ಒಮಾನ್ ನತ್ತ ತೆರಳುತ್ತಿದ್ದ ಒಮಾನ್ ಏರ್ ನ ವಿಮಾನದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಘಟನೆಯಿಂದ ವಿಮಾನದಲ್ಲಿ ಕೆಲಕಾಲ ಗೊಂದಲ ಉಂಟಾಗಿ ಪ್ರಯಾಣಿಕರು ಜೀವಭಯದಿಂದ ಆತಂಕಗೊಂಡಿದ್ದರು. ಸುಮಾರು 205 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಹಾರಾಟವಾಗಿ 16 ನಿಮಿಷಗಳಲ್ಲೇ ಒಂದು ಇಂಜಿನ್ ಕೈಕೊಟ್ಟಿದೆ. ಕೂಡಲೇ ಕಂಟ್ರೋಲ್ ರೂಂ ಗೆ ಸುದ್ದಿ ತಿಳಿಸಿದ ಪೈಲೆಟ್ ವಿಮಾನವನ್ನು ಇಂದು ಸಂಜೆ 5 ವೇಳೆಗೆ ಸುರಕ್ಷಿತವಾಗಿ ಮತ್ತೆ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಯಶಸ್ವಿಯಾಗಿದ್ದಾರೆ.

ಮೋದಿ ಧ್ಯಾನ ಮಾಡಿದ್ದ ಈ ಗುಹೆಗೆ ಸಖತ್ ಡಿಮ್ಯಾಂಡ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=mqkuBKSmeK8

About The Author