ನವದೆಹಲಿ: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ತೀವ್ರ ಹತಾಶರಾಗಿದ್ದ ರಾಹುಲ್ ಗಾಂಧಿ ತಮ್ಮ ನಿರ್ಧಾರದಂತೆಯೇ ಇದೀಗ ರಾಜೀನಾಮೆ ನೀಡಿದ್ದು ಸಿಡಬ್ಲ್ಯೂಸಿ ಅಂಗೀಕರಿಸಿದೆ.
ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತುಕೊಂಡ ರಾಹುಲ್ ಗಾಂಧಿ ಇನ್ನು ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಅಂತ ಹೇಳಿದ್ರು. ಈ ಬಗ್ಗೆ ಪಕ್ಷದ ಹಿರಿಯರು ಸಾಕಷ್ಟು ಸಲಹೆ ನೀಡಿದ್ರೂ ಅದನ್ನು ತಿರಸ್ಕರಿಸಿದ ರಾಹುಲ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ರು. ಇದೀಗ ಟ್ವಿಟ್ಟರ್ ನಲ್ಲಿ 4 ಪುಟಗಳ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿರೋ ರಾಹುಲ್, ದೇಶಕ್ಕಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಸದಾ ಪಕ್ಷದ ಜೊತೆಗಿರುತ್ತೇನೆ. ನೂತನ ಅಧ್ಯಕ್ಷರ ಆಯ್ಕೆಯನ್ನು ನಾನು ಮಾಡೋ ಬದಲು ಪಕ್ಷದ ಸದಸ್ಯರ ಒಮ್ಮತ ಪಡೆದು ಆಯ್ಕೆ ಮಾಡೋದು ಒಳ್ಳೆಯದು ಎಂದಿದ್ದಾರೆ.
ಇನ್ನು ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಮೋತಿಲಾಲ್ ವೋರಾರನ್ನು ಆಯ್ಕೆ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಂದು ವಾರದಲ್ಲಿ ಎಐಸಿಸಿಗೆ ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನೇಮಿಸಲಿದೆ.
ಇನ್ನು ರಾಜೀನಾಮೆ ನೀಡಿದ ಬಳಿಕ ರಾಹುಲ್ ಗಾಂಧಿ ತಾನು ಪಕ್ಷದ ಸದಸ್ಯನಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದಿದ್ದಾರೆ. ಅಲ್ಲದೆ ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹುದ್ದೆಯ ವಿವರವನ್ನೂ ರಾಹುಲ್ ಬದಲಾಯಿಸಿಕೊಂಡಿದ್ದಾರೆ.
ಬಜೆಟ್ ನಲ್ಲಿ ರಾಜ್ಯಕ್ಕೆ ಸಿಗಲಿದೆಯ ಬಂಪರ್ ಆಫರ್..?ಮಿಸ್ ಮಾಡದೇ ಈ ವಿಡಿಯೋ ನೋಡಿ