Thursday, December 12, 2024

Latest Posts

‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’

- Advertisement -

ಕೋಲಾರ:  ಬಂಗಾರಪ್ಪನವರು , ದೇವರಾಜ ಅರಸು , ರಾಮಕೃಷ್ಣ ಹೆಗ್ಡೆ ರವರು ಸೇರಿದಂತೆ  ರಾಜ್ಯದ ಬಹಳಷ್ಟು ರಾಜಕಾರಣಿಗಳು ಆನೇಕ ಹೊಸ ಪಕ್ಷಗಳನ್ನು ಕಟ್ಟಿದ್ದಾರೆ ಆದರೆ ಅವು ಯಾವವೂ ಈಗ ಅಸ್ತಿತ್ವ ದಲ್ಲಿ ಇಲ್ಲ  ಇನ್ನು ಜನಾರ್ದನ ರೆಡ್ಡಿ ಕಟ್ಟಿರುವ ಪಕ್ಷವು ಸಹ ಅದೇ ದಾರಿ ಹಿಡಿಯಲಿದೆ , ಎಷ್ಟೇ ಜನಾರ್ದನ ರೆಡ್ಡಿ ಗಳು ಬಂದರೂ ಸಹ ಬಿಜಿಪಿಗೆ ಒಂದು ಸಣ್ಣ ತೊಂದರೆನೂ ಆಗಲ್ಲ , ಅವರದು ಆತುರದ ನಿರ್ದಾರ ಕೇಂದ್ರದ ನಾಯಕರ ಜೊತೆ ಚರ್ಚಿಸಿ ಆಮೇಲೆ ಈ ತೀರ್ಮಾನಕ್ಕೆ ಬರಬೇಕಾಗಿತ್ತು ಅವರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೋಲಾರದಲ್ಲಿ ಸಚಿವ ಮುನಿರತ್ನಂನಾಯ್ಡು ಹೇಳಿಕೆ ನೀಡಿದ್ದಾರೆ .

ಕೋಲಾರದ ನಗರದ ಕೆಇಬಿ ಸಮುದಾಯ ಭವನದ ಬಳಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಮುನಿರತ್ನಂನಾಯ್ಡು ಕೋಲಾರದಲ್ಲಿ ಬಿಜೆಪಿ ಗೆಲ್ಲೋದು ಖಚಿತ , ನಂದಿನಿ ಯನ್ನು ಅಮೂಲ್ ಗೆ ಸೇರ್ಪಡೆ ಮಾಡುತ್ತಾರೆ ಎಂಬುದು ಎಲ್ಲಾ ಊಹಾಪೋಹ ಕಾಂಗ್ರೆಸ್ ನವರಿಗೆ ಮಾಡಲು ಯಾವುದೇ ಕೆಲಸ ಇಲ್ಲ ಅದ್ದಕ್ಕೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ,ವಿಲೀನದ ಬಗ್ಗೆ ನಮಗೆ ಯಾವುದೇ ಗಮನ ಇಲ್ಲ , ಯಾವುದೇ ಸಭೆ ಸಹ ಮಾಡಿಲ್ಲ ಹೀಗಿರುವಾಗ ಇದು ಕೇವಲ ಊಹಾಪೋಹ ಇದಕ್ಕೆಲ್ಲ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ .

ಮರೆತೂ ಕೂಡ ಖಾಲಿ ಹೊಟ್ಟೆಯಲ್ಲಿ ಈ 4 ಆಹಾರಗಳನ್ನು ತಿನ್ನಬೇಡಿ..!

ಇನ್ನು ಉದ್ಯಮಿ ಆತ್ಮಹತ್ಯೆ ವಿಚಾರದಲ್ಲಿ ಅರವಿಂದ ಲಿಂಬಾವಳಿ ಹೆಸರು ತಳಕು ಹಿನ್ನೆಲೆ ಮಾತನಾಡಿ ಕಾನೂನಿನ ವಿಚಾರದಲ್ಲಿ ಯಾರೂ ದೊಡ್ಡವರಲ್ಲ ಈ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಏನೂ ಇರುವುದಿಲ್ಲ ಕಾನೂನು ಅದರ ಕೆಲಸ ಅದು ಮಾಡುತ್ತದೆ ,

ಕಾಂಗ್ರೆಸ್ ನಿಂದ ಬಿಜೆಪಿ ಗೆ ಬರುವವರು ಕ್ಯೂ ನಲ್ಲಿ ಇದ್ದಾರೆ ಯಾರನ್ನು ಕರೆದುಕೊಳ್ಳಬೇಕು ಎಂಬುದು ಪಕ್ಷ ತೀರ್ಮಾನ ಮಾಡುತ್ತದೆ ಬೆಳಗ್ಗೆ ಐದು ಘಂಟೆಗೆ ನಮ್ಮ ಜೊತೆಯಲ್ಲಿ ಇರುತ್ತಾರೆ ಏಳುಘಂಟೆಗೆಲ್ಲಾ ಅವರವರ ಪಕ್ಷದಲ್ಲಿ ಇರುತ್ತಾರೆ ಕ್ಯೂ ತುಂಬಾ ದೊಡ್ಡದಾಗಿದೆ , ಚುನಾವಣೆ ಮುಂಚೆ ಅಥವಾ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು ಎರಡೂ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರ್ಪಡೆ ಯಾಗಲು ದೊಡ್ಡ ಸಂಖ್ಯೆಯಲ್ಲಿ ಕಾದಿದ್ದಾರೆ .

ಮಾಂಸಾಹಾರವನ್ನು ನೈವೆದ್ಯವಾಗಿ ಸ್ವೀಕರಿಸುವ ದೇವರು..!

ರಾಜ್ಯ ಬಿಜೆಪಿ ಪಕ್ಷದಲ್ಲಿ ನಾಯಕರ ಕೊರತೆ ಇದೆ ಎಂಬ ಡಿಕೆಶಿ ಮಾತಿಗೆ ಉತ್ತರಿಸಿದ ಸಚಿವರು ಅವರ ಪಕ್ಷದಲ್ಲಿ ನಾಯಕರು ಇದ್ದಾರಂತಾ? ಎಂದು ಪ್ರಶ್ನೆ ಮಾಡಿದ್ದು , ಅವರ ಬೆನ್ನು ಅವರಿಗೆ ಕಾಣಿಸುವುದಿಲ್ಲ ಬೇರೆಯವರ ಬಗ್ಗೆ ಮಾತಾಡುತ್ತಾರೆ , ನಮ್ಮಲ್ಲಿ ನಾಯಕರ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ .

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಮುನಿರತ್ನಂನಾಯ್ಡು ರಮೇಶ್ ಜಾರಕೀಹೊಳಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಾವುದೇ ವಿರೋಧವಿಲ್ಲ ಕೆಲವು ಕುತಂತ್ರದ ಸಂಚಿಗೆ ಅವರು ಒಳಗಾಗಿದ್ದಾರೆ, ಅವರು ನಮ್ಮ ಪಕ್ಷದ ಒಬ್ಬ ಪ್ರಭಾವಿ ನಾಯಕರು ಎಂದು ಹೇಳಿಕೆ ನೀಡಿದ್ದಾರೆ .

- Advertisement -

Latest Posts

Don't Miss