National Political News: ಪ್ರಧಾನಿ ಮೋದಿ ಮತ್ತು ಬಿಜೆಪಿಯವರು, ಮುಸ್ಲಿಂರು ಬಹುಸಂಖ್ಯಾತರಾಗುತ್ತಾರೆ ಎಂದು ಸುದ್ದಿ ಹಬ್ಬಿಸಿದ್ದು, ಕಾಂಗ್ರೆಸ್‌ನವರು ದೇಶದ ಎಲ್ಲ ಸಂಪತ್ತನ್ನೂ ಮುಸ್ಲಿಂರಿಗೆ ಕೊಡುತ್ತಾರೆ ಎಂಬ ಭಯದಲ್ಲಿದ್ದಾರೆ. ಆದರೆ ದೇಶದಲ್ಲಿ ಹೆಚ್ಚು ಕಾಂಡೋಮ್ ಬಳಸುವುದೇ ಮುಸ್ಲಿಂಮರು ಎಂದು ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ಅಲ್ಲದೇ, ಮುಸ್ಲಿಂಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ, ಭಾರತದಲ್ಲಿ ಮುಸ್ಲಿಂರು ಬಹುಸಂಖ್ಯಾತರಾಗುತ್ತಾರೆ ಎಂದು ಬಿಜೆಪಿ ಮತ್ತು ಆರ್‌ಎಸ್ಎಸ್ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಅಂತಾ ಹೇಳಿ ಮೋದಿ ಎಲ್ಲರನ್ನೂ ವಂಚಿಸುತ್ತಿದ್ದಾರೆಂದು ಓವೈಸಿ ಹೇಳಿದ್ದಾರೆ.
ಮುಸ್ಲಿಂಮರನ್ನು ನುಸುಳುಕೋರರು ಎಂದು ಆರೋಪಿಸಿರುವ ಮೋದಿಯವರು, ನಮ್ಮಿಂದಲೇ ದೇಶದ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಮುಸ್ಲಿಂ ಮತ್ತು ಹಿಂದೂಗಳ ನಡುವೆ ದ್ವೇಷ ಬಿತ್ತುವ ಕೆಲಸ ಮೋದಿ ಮಾಡಿದ್ದಾರೆಂದು ಓವೈಸಿ ಹೇಳಿದ್ದಾರೆ.
ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

