Hubli News: ಹುಬ್ಬಳ್ಳಿ; ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಿ ಎಲ್ಲಾ ಜಿಲ್ಲೆಯಲ್ಲಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸರು ಹಾಗೂ ಅಧಿಕಾರಿಗಳ ನನ್ನ ಜೊತೆಗೆ ವರ್ತನೆ ಮಾಡಿದ್ದು, ಸರಿಯಲ್ಲ ಅಲ್ಲದೇ ಜಿಲ್ಲೆಗೆ ಒಂದು ವಾರ ನಿರ್ಬಂಧ ಹಾಕಿದ್ದು ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ನಗರದಲ್ಲಿಂದು ಚಿತ್ರಮಂದಿರಗಳಿಗೆ ಲವ್ ಜಿಹಾದ್ ಪುಸ್ತಕ ಹಂಚುವ ವೇಳೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ನನ್ನ ಜೊತೆಗೆ ನಡೆದುಕೊಂಡಿರುವ ಅಧಿಕಾರಿಗಳಿಗೆ ಹಾಗೂ ಎಸ್.ಪಿ ಯವರ ವರ್ತನೆ ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.




