Friday, June 20, 2025

Latest Posts

ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು: ಯೂಟರ್ನ್ ಹೊಡೆದ ಎಬಿಡಿ

- Advertisement -

Cricket News: ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು ಎಂದು ಎ.ಬಿ.ಡೆವಿಲ್ಲಿಯರ್ಸ್ ಹೇಳಿದ್ದಾರೆ. ಭಾರತ ಇಂಗ್ಲೆಂಡ್‌ ನಡುವೆ ಟೆಸ್ಟ್ ಸರಣಿ ನಡೆದಿದ್ದು, ಎರಡು ಪಂದ್ಯಗಳಿಂದ ವಿರಾಟ್ ಹೊರಗೆ ಉಳಿದಿದ್ದರು. ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತ, ಕ್ರಿಕೇಟಿಗ ಎಬಿಡಿ, ವಿರಾಟ್ ಮತ್ತು ಅನುಷ್ಕಾ ದಂಪತಿ ತಮ್ಮ ಎರಡನೇಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ವಿರಾಟ್ ಈ ಪಂದ್ಯದಲ್ಲಿ ಭಾಗವಹಿಸಿಲ್ಲವೆಂದು ಹೇಳಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಎಷ್ಟರ ಮಟ್ಟಿಗೆ ಹಬ್ಬಿತ್ತೆಂದರೆ, ಅನುಷ್ಕಾ ಶರ್ಮಾ ವೀಡಿಯೋದಲ್ಲಿ ಜನ ಆಕೆಯ ಹೊಟ್ಟೆಯನ್ನು ನೋಡಿ, ಅಂದಾಜಿಸಲು ಶುರು ಮಾಡಿದ್ದರು. ಆದರೆ ಇದೀಗ, ಎಬಿಡಿ ಉಲ್ಟಾ ಹೊಡೆದಿದ್ದು, ನಾನು ಅಂದು ವಿರಾಟ್ ಅನುಷ್ಕಾ ಮತ್ತೊಮ್ಮೆ ತಂದೆ ತಾಯಿ ಆಗುತ್ತಿದ್ದಾರೆ, ಎರಡನೇಯ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಹೇಳಿದ್ದು ಸುಳ್ಳು ಎಂದು ಹೇಳಿದ್ದಾರೆ.

ಅಲ್ಲದೇ, ವಿರಾಟ್ ತಮ್ಮ ಕುಟುಂಬಸ್ಥರಿಗೆ ಸದಾ ಪ್ರಮುಖ ಆದ್ಯತೆ ನೀಡುತ್ತಾರೆ. ಅವರು ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಆರೋಗ್ಯವಾಗಿರಲಿ. ಮತ್ತೆ ಪಂದ್ಯಕ್ಕೆ ಮರಳಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಈ ಮೊದಲು ವಿರಾಟ್ ತಾಯಿಗೆ ಅನಾರೋಗ್ಯವಿರುವ ಹಿನ್ನೆಲೆ ವಿರಾಟ್ ಪಂದ್ಯದಿಂದ ದೂರ ಉಳಿದಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿರಾಟ್ ಸಹೋದರ, ನಮ್ಮ ತಾಯಿ ಆರೋಗ್ಯವಾಗಿದ್ದಾರೆ. ಅವರಿಗೇನೂ ಆಗಿಲ್ಲ. ವಿರಾಟ್ ಪಂದ್ಯದಿಂದ ದೂರ ಉಳಿಯಲು ಬೇರೆ ಕಾರಣಗಳಿದೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದರು.

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್..

ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ

ನಿಮಗೆ ಮಾಡಿಸಿರುವ ಮಾಟ ತೆಗೆದು ಹಾಕುತ್ತೇನೆಂದು ನಕಲಿ ಫಕೀರ ಮಾಡಿದ್ದೇನು ಗೊತ್ತೇ..?

- Advertisement -

Latest Posts

Don't Miss