Monday, September 9, 2024

Latest Posts

ನನ್ನ ಪತಿಯ ಶವಸಂಸ್ಕಾರಕ್ಕಿಂತ ನನಗೆ ನನ್ನ ಪ್ರವಾಸವೇ ಮುಖ್ಯ: ಸ್ವಾರ್ಥಿ ಪತ್ನಿಯ ಹೇಳಿಕೆ ವೈರಲ್

- Advertisement -

International News: ಡಿವೋರ್ಸ್ ಆಗದೇ, ಪತಿ-ಪತ್ನಿ 17 ವರ್ಷ ಸಂಸಾರ ನಡೆಸಿ, ಪತಿ ತೀರಿಹೋದಾಗ, ಪತ್ನಿಯಾದವಳು ಏನು ಮಾಡುತ್ತಾಳೆ..? ಪತಿಯನ್ನು ಕಳೆದುಕೊಂಡ ದುಃಖದಲ್ಲಿರುತ್ತಾಳೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಓಡಿ ಪತಿಯನ್ನು ನೋಡಲು ಬರುತ್ತಾಳೆ. ಆದರೆ ಇಲ್ಲೊಬ್ಬಳು ಪತ್ನಿ, ತಾನು ಪ್ರವಾಸಕ್ಕಾಗಿ ಹೋದ ವೇಳೆಯೇ ಪತಿ ತೀರಿಹೋಗಿದ್ದಾನೆ. ಆದರೆ ನನಗೆ ಆತನ ಶವಸಂಸ್ಕಾರದಲ್ಲಿ ಭಾಗಿಯಾಗಲು ಇಷ್ಟವಿಲ್ಲ. ಯಾಕಂದ್ರೆ ನಾನು ಪ್ರವಾಸವನ್ನು ಎಂಜಾಯ್ ಮಾಡಬೇಕು ಎಂದಿದ್ದಾಳೆ.

ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನ ಆಕ್ರೋಶ ಹೊರಹಾಕಿದ್ದಾರೆ. ನಾನು ತುನಿಷಿಯಾಗೆ ರಜೆ ಕಳೆಯ ಬಂದ ಸಮಯದಲ್ಲೇ ನನ್ನ ಪತಿ ಸಾವಿಗೀಡಾಗಿದ್ದಾರೆ. ನಾವಿಬ್ಬರೂ 17 ವರ್ಷ ಸಂಸಾರ ನಡೆಸಿದ್ದೇವೆ. ಆದರೆ ಈಗ ಆತ ನನ್ನನ್ನು ಬಿಟ್ಟು ಹೋಗಿದ್ದಾನೆ. ನಾನು ಪ್ರವಾಸದಲ್ಲಿರುವಾಗಲೇ ಆತ ಸತ್ತಿದ್ದಾನೆ. ಆದರೆ ನನಗೆ ಅವನ ಅಂತಿಮ ಸಂಸ್ಕಾರಕ್ಕೆ ಹೋಗಿ, ಚರ್ಚ್‌ನಲ್ಲಿ ಅಳುವವರನ್ನು ನೋಡುವ ಯಾವ ಇಂಟ್ರೆಸ್ಟೂ ಇಲ್ಲ. ನಾನು ನನ್ನ ಪ್ರವಾಸವನ್ನು ಎಂಜಾಯ್ ಮಾಡಬೇಕು ಅಂತಿದ್ದೇನೆ.

ಇಲ್ಲಿ ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಮತ್ತು ಆತ ತುಂಬಾ ಶ್ರೀಮಂತನಿದ್ದಾನೆ. ನನಗೆ ದುಡ್ಡು ಎಂಬುದು ಎಲ್ಲಕ್ಕಿಂತ ಮುಖ್ಯವಾದ ವಸ್ತುವಾಗಿದ್ದು, ಅದರ ಅವಶ್ಯಕತೆ ನನಗೆ ತುಂಬಾ ಇದೆ ಎಂದು ಸ್ವಾರ್ಥಿಯ ರೀತಿ ಮಾತನಾಡಿ ವೀಡಿಯೋ ಮಾಡಿದ್ದು, ವೈರಲ್ ಆಗಿದೆ.

ಇನ್ನು ಈ ವೀಡಿಯೋ ಅದೆಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಕೆಲವರು ಇದನ್ನು ಜೋಕ್ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಕಾಮೆಂಟ್ ಮಾಡಿದ್ದಾರೆ. ಪತಿ ಆಕೆಗಾಗಿ ಒಂದು ಪೈಸೆಯನ್ನು ಕೂಡ ಇಟ್ಟು ಹೋಗಬಾರದು. ಆಕೆಗೇನೂ ಸಿಗಬಾರದು. ಆಕೆಯೇ ಪತಿಯ ಕೊಲೆ ಮಾಡಿ, ಪ್ರವಾಸಕ್ಕಾಗಿ ಬಂದಿರಬಹುದು ಎಂದು ತರಹೇವಾರಿಯಾಗಿ ಕಾಮೆಂಟ್ ಹಾಕಿದ್ದಾರೆ.

ಈಕೆಯ ಹೇಳಿಕೆ ನೋಡಲು ಈ ಲಿಂಕ್ ಪ್ರೆಸ್ ಮಾಡಿ

- Advertisement -

Latest Posts

Don't Miss