Monday, September 9, 2024

Latest Posts

ಸದಾಕಾಲ ಸ್ವಾವಲಂಬಿಯಾಗಿರಬೇಕು ಎನ್ನುವ ರಾಶಿಯ ಹುಡುಗಿಯರು ಇವರು

- Advertisement -

Horoscope: ಹಲವು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲಸ ಮಾಡಿ, ತಮ್ಮ ಖರ್ಚಿಗಾಗುವಷ್ಟು ಸಂಪಾದನೆ ಮಾಡುತ್ತಾರೆ. ಆದರೆ ಮದುವೆಯ ಬಳಿಕ, ಪತಿಯ ಮನೆಯಲ್ಲಿ ಬೇಡವೆಂದ ಕಾರಣಕ್ಕೋ, ಮಕ್ಕಳಾದ ಕಾರಣಕ್ಕೋ ಅಥವಾ, ಜವಾಬ್ದಾರಿ ಹೆಚ್ಚಾಗುವ ಕಾರಣಕ್ಕೋ, ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳು ಹಾಗಲ್ಲ. ಎಷ್ಟೋ ಜವಾಬ್ದಾರಿ ಹೆಚ್ಚಲಿ, ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲುವುದಕ್ಕೆ ಇಷ್ಟಪಡುವುದಿಲ್ಲ. ಅಂಥ ಸ್ವಾವಲಂಬಿ ರಾಶಿಯವರ ಬಗ್ಗೆ ನಾವಿವತ್ತು ಮಾತನಾಡಲಿದ್ದೇವೆ.

ಮೇಷ ರಾಶಿ: ಮೇಷ ರಾಶಿಯ ಹೆಣ್ಣು ಮಕ್ಕಳು ತಾವು ಅಂದುಕೊಂಡಿದ್ದನ್ನು ಸಾಧಿಸುವುದರಲ್ಲಿ ಮುಂದಿರುತ್ತಾರೆ. ದೇವರ ದಯೆ ಅವರ ಮೇಲೆ ಸದಾ ಇರುವ ಕಾರಣ, ಅವರು ಮಾಡಬೇಕೆಂದುಕೊಂಡ ಕೆಲಸದಲ್ಲಿ ಅವರು ಸಫಲರಾಗುತ್ತಾರೆ. ಇನ್ನು ಮದುವೆಯ ಬಳಿಕವೂ ತಾವು ಸ್ವಾವಲಂಬಿಯಾಗಿರಬೇಕು. ಇನ್ನೊಬ್ಬರ ಮುಂದೆ ಕೈ ಚಾಚಬಾರದು ಅನ್ನುವ ಗುಣ ಇವರದ್ದಾಗಿರುತ್ತದೆ.

ಕರ್ಕಾಟಕ ರಾಶಿ: ಕಟಕ ರಾಶಿಯವರು ಕೂಡ ಇನ್ನೊಬ್ಬರ ಬಳಿ ಸಹಾಯ, ದುಡ್ಡು, ವಸ್ತು ಕೇಳಲು ಹಿಂಜರಿಯುತ್ತಾರೆ. ಹಾಗಾಗಿ ದೇಹದಲ್ಲಿ ಶಕ್ತಿ ಇರುವವರೆಗೂ ದುಡಿದೇ ತಿನ್ನಬೇಕು ಅನ್ನೋದು ಇವರ ನಿರ್ಧಾರವಾಗಿರುತ್ತದೆ. ಸಿಗುವ ಕೆಲ ಸಮಯವನ್ನಾದರೂ ಬಳಸಿಕೊಂಡು, ತಮ್ಮ ಖರ್ಚಿಗಾಗುವಷ್ಟಾದರೂ ದುಡಿಯಲೇಬೇಕು ಎನ್ನುವ ಮನಸ್ಥಿತಿ ಇವರದ್ದಾಗಿರುತ್ತದೆ.

ತುಲಾ ರಾಶಿ: ತುಲಾ ರಾಶಿಯ ಜನ ಮನೆ ಜನರ ಹಂಗಿನಲ್ಲೂ ಇರಲು ಬಯಸುವುದಿಲ್ಲ. ಈ ರಾಶಿಯ ಹೆಣ್ಣು ಮಕ್ಕಳು, ತಮ್ಮ ಮನೆಯ ಕಷ್ಟ ನಷ್ಟಗಳಿಗೂ ಸ್‌ಪಂದಿಸುವ ಜನರಾಗಿರುತ್ತಾರೆ. ಜೀವನ ಸಂಗಾತಿ ಅಥವಾ ಅವರ ಮನೆಯವರು ಕಷ್ಟದಲ್ಲಿದ್ದಾಗ, ಅವರಿಗೆ ಸಹಾಯ ಮಾಡುವ ಮನೋಭಾವವೂ ಇವರಲ್ಲಿರುತ್ತದೆ. ಇವರು ಕೂಡ ಸದಾ ಕಾಲದ ಸ್ವಾಭಿಮಾನಿಗಳು.

ಕುಂಭ ರಾಶಿ: ಕುಂಭ ರಾಶಿಯವರು ಹೆಚ್ಚು ಆಸೆ ಪಡುವುದಿಲ್ಲ. ಹಾಗಾಗಿ ಇವರು ಕೇಳದಿದ್ದರೂ, ಇವರಿಗೆ ಸದಾ ಕಾಲ ಉತ್ತಮ ಕೆಲಸ, ಉತ್ತಮ ಸಂಬಳ ಎಲ್ಲವೂ ಸಿಗುತ್ತದೆ. ಅಲ್ಲದೇ, ಮನೆಜನರ ಕಷ್ಟಕ್ಕೆ, ತಮ್ಮವರ ಖರ್ಚಿಗೆ ಹಣ ನೀಡಲು ಇಷ್ಟಪಡುವ ಇವರು, ಕಷ್ಟಕಾಲಕ್ಕಾಗಿ ಮಾತ್ರ ತಮ್ಮ ಬಳಿ ಹಣ ಇರಲೇಬೇಕು ಎಂಬ ಮನಸ್ಥಿತಿ ಉಳ್ಳವರಾಗಿರುತ್ತಾರೆ.

- Advertisement -

Latest Posts

Don't Miss