www.karnatakatv.net : ಮೈಸೂರು :ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಮೈಸೂರು ಯುವತಿ ಅತ್ಯಾಚಾರ ಪ್ರಕರಣದ ಆರೋಪಿಗಳ ಸುಳಿವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಂಗಳವಾರ ನಡೆದ ಈ ಘನ ಘೋರ ಕೃತ್ಯವೆಸಗಿದ ಪಾಪಿಗಳ ಜಾಡುಹಿಡಿದು ಖಾಕಿ ಹೊರಟಿದ್ದು ಶೀಘ್ರವೇ ಬಂಧಿಸೋ ಸಾಧ್ಯತೆ ಇದೆ.
ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ. ಈ ಮಧ್ಯೆ ಆರೋಪಿಗಳನ್ನ ಪತ್ತೆ ಹಚ್ಚೋಕೆ ತಲೆ ಬಿಸಿ ಮಾಡಿಕೊಂಡಿರೋ ಪೊಲೀಸರ ತಂಡ ಇದೀಗ ಆರೋಪಿಗಳ ಪತ್ತೆ ಹಚ್ಚಿದೆ. ತಾವು ಕಲೆಹಾಕಿರೋ ಮಾಹಿತಿ ಪ್ರಕಾರ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಆರೋಪಿಗಳು ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ರು. ಇವರಲ್ಲಿ ಮೂವರು ತಮಿಳುನಾಡಿವರಾದ್ರೆ ,ಮತ್ತೋರ್ವ ಕೇರಳ ಮೂಲದವನು ಅಂತ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಲ್ಪವೂ ತಡ ಮಾಡದ ತನಿಖಾ ತಂಡ ಇದೀಗ ಕೇರಳದತ್ತ ತೆರಳಿದೆ.
ಇನ್ನು ಘಟನೆ ಬಳಿಕ ಆರೋಪಿಗಳು ಬುಧವಾರ ನಡೆದ ಪರೀಕ್ಷೆಗೂ ಹಾಜರಾಗಿರಲಿಲ್ಲ. ಈ ಬಗ್ಗೆ ಮತ್ತಷ್ಟು ವಿವರ ಪಡೆದ ಪೊಲೀಸರಿಗೆ ಇದೀಗ ನಾಲ್ವರ ಮೇಲೆ ಅನುಮಾನ ಬಂದಿದ್ದು. ಇವರೇ ಆರೋಪಿಗಳು ಅನ್ನೋ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ಕರ್ನಾಟಕ ಟಿವಿ- ಮೈಸೂರು