Saturday, July 27, 2024

Latest Posts

ಮೈಸೂರಿನಲ್ಲಿ ಡಿಸೆಂಬರ್ 10ಕ್ಕೆ ಡಿಬಾಸ್ ‘ಕ್ರಾಂತಿ’ಗೆ ಭರ್ಜರಿ ಸಿದ್ಧತೆ

- Advertisement -

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ರಚಿತಾ ರಾಮ್‌ ನಟನೆಯ ‘ಕ್ರಾಂತಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವರ್ಷ ತೆರೆ ಕಂಡ ‘ರಾಬರ್ಟ್‌’ ನಂತರ ದರ್ಶನ್‌ ಅಭಿನಯದ ಯಾವುದೇ ಹೊಸ ಸಿನಿಮಾ ತೆರೆ ಕಂಡಿರಲಿಲ್ಲ. ಇನ್ನು ಡಿಬಾಸ್ ಅವರ ಅಭಿಮಾನಿಗಳು ಹೊಸ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ‘ಕ್ರಾಂತಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿಸಿದೆ.

ಯಾವುದೇ ವೆಚ್ಚವಿಲ್ಲದೆ ಕರಿಬೇವಿನಿಂದ ಕೂದಲಿನ ಸಮಸ್ಯೆಗಳಿಗೆ ಪರಿಹಾರ..!

ಕ್ರಾಂತಿ ಚಿತ್ರದಲ್ಲಿ ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಟೀಸರ್ ನಲ್ಲಿ ಡಿಬಾಸ್ ಸೂಟು, ಬೂಟು ತೊಟ್ಟು ಮಿಂಚಿದ್ದಾರೆ. ಕ್ರಾಂತಿ ಚಿತ್ರದ ಮೂಲಕ ದರ್ಶನ್ ಅವರನ್ನು ಕಣ್ಣುತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕ್ರಾಂತಿ ಚಿತ್ರ ತಂಡದಿಂದ ಮತ್ತೊಂದು ವಿಷಯ ಹೊರಬಿದ್ದಿದ್ದು, ಇದೆ ಡಿ.10ಕ್ಕೆ“ಕ್ರಾಂತಿ” ಚಿತ್ರದ ಥೀಮ್ ಸಾಂಗ್ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಶೈಲಜಾ ನಾಗ್ ಟ್ವಿಟ್ ಮಾಡಿದ್ದಾರೆ. ಇನ್ನು ದರ್ಶನ್ ಅವರ ಅಭಿಮಾನಿಗಳ ‘ಕ್ರಾಂತಿ’ಯ ಸಂಭ್ರಮ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.

ರೊಟ್ಟಿ ತಿಂದರೆ ತೂಕ ಕಡಿಮೆಯಾಗುತ್ತೋ ಇಲ್ಲವೋ..? ಡಯೆಟಿಷಿಯನ್ ಗಳು ಹೇಳುವುದೇನು..?

‘ಹೊಳೆನರಸಿಪುರದವರನ್ನ ಹಾಸನಕ್ಕೆ ಕರೆತಂದು ಗೆಲ್ಲಿಸ್ತೀವಿ ಅನ್ನೋ ಭ್ರಮೆಯಲ್ಲಿದ್ರೆ, ಹೊರಬನ್ನಿ’

- Advertisement -

Latest Posts

Don't Miss