ಹುಣಸೂರು:ತಾಲೂಕಿನ ಹನಗೋಡ ನಾಡಕಚೇರಿಯಲ್ಲಿ ನೀವೂ ಸರ್ಕಾರಕ್ಕೆ ಸಂಬಂಧ ಪಟ್ಟ ಯಾವುದೇ ಪ್ರಮಾಣ ಪತ್ರ ಪಡೆಯಬೇಕೆಂದರೆ ಹಣವನ್ನು ನೀಡಿ ಪಡೆಯಬೇಕಂತೆ ಅದು ಹತ್ತು ಇಪ್ಪತ್ತು ಅಲ್ಲ ಬರೋಬ್ಬರಿ 1000 ದಿಂದ 3000 ಸಾವಿರದ ವರೆಗೆ ಹಣವನ್ನು ಪಡೆದುಕೊಳ್ಳುತ್ತಾರಂತೆ ಅವರು ವಿಧವೆಯಾಗಿರಲಿ ಅಥವಾ ವೃದ್ದರಾಗಿರಲಿ ಹಣ ಕೊಟ್ಟು ಪ್ರಮಾಣ ಪತ್ರ ಪಡೆಯಬೇಕಂತೆ.
ಬೆಳಿಗ್ಗೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವುದಲ್ಲದ್ದೆ ಸಹಿ ಹಾಕುವುದಕ್ಕೆ ಉಪ ತಹಶಿಲ್ದಾರ್ ಚೆಲುವರಾಜ್ ರವರು 200 ರೂಪಾಯಿ ಹಣ ಪಡೆದುಕೊಳ್ಳುತ್ತಾರೆ. ಹಣ ಕೊಡದಿದ್ದರೆ ಅರ್ಜಿ ವಿಳಂಬ ಮಾಡಲಾಗುವುದಂತೆ ಇಂತಹ ಭ್ರಷ್ಟ ಚೆಲುವರಾಜ್ ತಹಶಿಲ್ದಾರ್ ತೊಲಗಲಿ ಎಂದು ಸಂಘರ್ಷ ಸಮಿತಿ ಸಂಚಾಲಕ ಸಿದ್ದೇಶ್ ಶೆಟ್ಟಳ್ಳಿ ರಮೇಶ್ ನಾಡಕಛೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ರು.
ಕೆಲವು ಮಾಧ್ಯಮಗಳು ಹಾಗೂ ಪತ್ರಿಕೆಗಳು ಭ್ರಷ್ಟಾಅಧಿಕಾರಿ ವಿರುದ್ಧ ಸಾಕಷ್ಟು ಸುದ್ದಿ ಮಾಡ್ತಿದ್ರು ಯಾವುದೇ ಬದಲಾವಣೆ ಆಗುತ್ತಿಲ್ಲ. ಬಡವರನ್ನು ಸುಲಿಗೆ ಮಾಡುತ್ತಿರುವ ರಣಹದ್ದು ಎಂದು ಸಿದ್ದೇಶ್ ರಮೇಶ್ ರವರು ಬೇಸರ ವ್ಯಕ್ತಪಡಿಸಿದ್ರು
ವರದಿ :-ರವಿಕುಮಾರ್ ಹುಣಸೂರು
ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 1
Joshi : ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ.

