Monday, October 2, 2023

Latest Posts

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2

- Advertisement -

Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ..

ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ ರೀತಿ ಹೇಳಿದ್ದರು. ನಿನ್ನೆ ನೀವು ಯಾವ ಬಾಲಕನನ್ನು ಜಾತಿ ಬೇಧದ ಆಧಾರದ ಮೇಲೆ ಬೈದು, ಲಾಸ್ಟ್ ಬೆಂಚಿನಲ್ಲಿ ಕೂರಿಸಿದ್ದಿರೋ, ಆ ಬಾಲಕ ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುತ್ತಾನೆ. ಮತ್ತು ಅವನ ಸಮ್ಮಾನ ಸಮಾರಂಭಕ್ಕೆ ಹೋಗಲು, ನೀವೂ ಕೂಡ ಕಾತರಿಸುತ್ತೀರಿ ಎಂದಿದ್ದರಂತೆ. ಅವರ ಮಾತಿನಂತೆ ಕಲಾಂ ರಾಷ್ಟ್ರ ಮೆಚ್ಚಿದ, ನೆಚ್ಚಿನ ರಾಷ್ಟ್ರಪತಿಯಾದರು.

ಮುಂದೊಂದು ದಿನ ಏರ್‌ಫೋರ್ಸ್‌ಗೆ ಹೋಗಬೇಕು ಎಂಬ ಆಸೆಯಿಂದ, ಪರೀಕ್ಷೆ ಬರೆದರು, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಇಂಟರ್‌ವ್ಯೂವ್‌ಗಾಗಿ ಡೆಹ್ರಾಡೂನ್‌ಗೂ ಹೋದರು. ಆದರೆ ಅಲ್ಲಿ ಬರೀ 8 ಸೀಟ್‌ಗಳಿದ್ದವು. 50 ಜನ ಸಂದರ್ಶನಕ್ಕೆ ಬಂದಿದ್ದರು. ಅದರಲ್ಲಿ ಕಲಾಂ 9ನೇಯವರಾಗಿದ್ದರು. ಒಂದೇ ಒಂದು ಸೀಟ್‌ ಕೈತಪ್ಪಿ, ಕಲಾಂ ತಮ್ಮ ಆಸೆಯನ್ನ ಅಲ್ಲಿಗೆ ಮೊಟಕುಗೊಳಿಸಿದ್ದರು.

ಆದರೆ ಮುಂದೊಂದು ದಿನ ಇಸ್ರೋದಲ್ಲಿ ಕೆಲಸ ಪಡೆಯುವಲ್ಲಿ ಕಲಾಂ ಅವರು ಸಫಲರಾದರು. ವಿಕ್ರಂ ಸಾರಾಭಾಯ್ ಜೊತೆ ಕೆಲಸ ಮಾಡಿದರು. ಈ ವೇಳೆ ಅವರು ಹೇಳಿದ್ದೇನೆಂದರೆ, ನಾನು ಸಾರಾಭಾಯ್ ಜೊತೆ ಕೆಲಸ ಮಾಡಿ, ಒಂದನ್ನಂತೂ ಕಲಿತಿದ್ದೇನೆ. ನಾವು ಯಾವ ಕೆಲಸವನ್ನು ಮಾಡುತ್ತೇವೋ, ಅದನ್ನು ಗಮನವಿಟ್ಟು, ನಿಯತ್ತಿನಿಂದ, ಇಷ್ಟಪಟ್ಟು ಮಾಡಬೇಕು. ಅಥವಾ ನಮಗೆ ಇಷ್ಟವಿರುವ ಕೆಲಸವನ್ನೇ ನಾವು ಮಾಡಬೇಕು. ಇಷ್ಟವಿಲ್ಲದ ಕೆಲಸ ಮಾಡಿದರೆ, ಅದರಿಂದೇನೂ ಪ್ರಯೋಜನವಾಗುವುದಿಲ್ಲ ಎಂದು ಕಲಾಂ ಹೇಳಿದ್ದರು.

ಓರ್ವ ವ್ಯಕ್ತಿ ಕಲಾಂ ಅವರಿಗೆ ನೀವು ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಕಲಾಂ, ನನಗೆ ಈಗಾಗಲೇ ಮಿಸೈಲ್ ಜೊತೆ ಮದುವೆಯಾಗಿದೆ. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಎಂದು ಹೇಳಿದರು. ಅಲ್ಲದೇ ಕಲಾಂ ಅವರಿಗೆ ನಿಶ್ಚಿತಾರ್ಥ ಫಿಕ್ಸ್ ಮಾಡಲಾಗಿತ್ತು. ಆದರೆ ಕಲಾಂ ಆ ದಿನ ತಮ್ಮ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಹಾಗಾಗಿ ಅವರಿಗೆ ತಮ್ಮ ನಿಶ್ಚಿತಾರ್ಥವೂ ಮರೆತುಹೋಯಿತು. ಅಂದೇ ಕಲಾಂ ತಾವು ವಿವಾಹವಾಗಬಾರದು ಅಂತಾ ನಿಶ್ಚಯಿಸಿದರು.

ಇದಾದ ಬಳಿಕ, ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕಲಾಂ ಅವರು, ಅತ್ಯುತ್ತಮ ಆಡಳಿತ ನಡೆಸಿದರು. ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತರತ್ನ ಪ್ರಶಸ್ತಿ ಸೇರಿ ಇನ್ನೂ ಹಲವು ಪ್ರಶಸ್ತಿಗಳನ್ನು ಕಲಾಂ ಗಳಿಸಿದ್ದಾರೆ. ಜುಲೈ 27, 2015ರಂದು, ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುವಾಗ, ಕಲಾಂ ಹೃದಯಾಘಾತದಿಂದ ನಿಧನರಾದರು.

ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 2

ಸಿಂಧಿ ಜನರು ವ್ಯಾಪಾರದಲ್ಲಿ ಬುದ್ಧಿವಂತರಾಗಿರಲು ಕಾರಣವೇನು..?

ವ್ಯಾಪಾರ ಉತ್ತಮವಾಗಿರಬೇಕು ಅಂದ್ರೆ ಇಂಥ ಮಾತುಗಳನ್ನಾಡಬೇಡಿ..

- Advertisement -

Latest Posts

Don't Miss