Health: ಅರಿಶಿನ ಅನ್ನೋದು, ಭಾರತೀಯರ ಅಡುಗೆ ಮನೆಯಲ್ಲಿ ಸದಾ ಇರುವಂಥ ಪದಾರ್ಥ. ಇದು ಬರೀ ಅಡುಗೆಯ ರುಚಿ, ಬಣ್ಣವನ್ನ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಅಡುಗೆ ಮಾಡಲು ಮಾತ್ರವಲ್ಲದೇ, ಸೌಂದರ್ಯವರ್ಧನೆಗೂ ಅರಿಶಿನವನ್ನು ಬಳಸಲಾಗುತ್ತದೆ. ಹಾಗಾದರೆ ಅರಿಶಿನ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಅರಿಶಿನ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಕಾರಣಕ್ಕೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿಯೇ, ಜ್ವರ, ಶೀತ, ಕೆಮ್ಮು ಬಂದಾಗ, ಅರಿಶಿನ ಹಾಲು ಮಾಡಿ ಕೊಡಲಾಗುತ್ತದೆ. ಅಪಘಾತವಾದಾಗ, ಅಥವಾ ನಂಜು, ಗಾಯವಾದಾಗ, ಅರಿಶಿನ ಹಾಲು ಕುಡಿಯುವುದರಿಂದ ಆ ಗಾಯ ಬೇಗ ಮಾಸುತ್ತದೆ ಅಂತಾ ಹೇಳಲಾಗುತ್ತದೆ.
ಹೊಟ್ಟೆ ಹುಳ ಹೆಚ್ಚಾಗಬಾರದು ಅಂದ್ರೆ, ನೀವು ತಯಾರಿಸುವ ಅಡುಗೆಯಲ್ಲಿ ಅರಿಶಿನವಿರಬೇಕು. ಇನ್ನು ಮಕ್ಕಳಿಗೆ ಹೆಚ್ಚು ಜಂತಾಗುತ್ತದೆ. ಈ ಕಾರಣಕ್ಕೆ ಮಕ್ಕಳಿಗೂ ನೀವು ವಾರಕ್ಕೆ 2 ಬಾರಿ ಅರಿಶಿನ ಹಾಲು ಮಾಡಿ ಕುಡಿಸಬಹುದು. ಇನ್ನು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಲು, ಅರಿಶಿನ ಸಹಾಯಕವಾಗಿದೆ. ಅರಿಶಿನವನ್ನು ಮಿತವಾಗಿ, ಸರಿಯಾದ ರೀತಿಯಲ್ಲಿ ಬಳಸುವವರ ತೂಕ ಸರಿಯಾಗಿ ಇರುತ್ತದೆ.
ಒಣ ಕೆಮ್ಮು ಇದ್ದವರು ರಾತ್ರಿ ಊಟವಾದ ಬಳಿಕ, ಮಲಗುವ ಮುನ್ನ, ಕೊಂಚ ಅರಿಶಿನ ಮತ್ತು ಕೊಂಚ ಬೆಲ್ಲ ಸೇರಿಸಿ, ಚಿಕ್ಕ ಲಾಡುವಿನ ಹಾಗೆ ಮಾಡಿ, ತಿನ್ನಬೇಕು. ಮತ್ತು ಏನನ್ನೂ ಕುಡಿಯದೇ, ತಿನ್ನದೇ ಮಲಗಬೇಕು. ನೀರನ್ನು ಸಹ ಕುಡಿಯಬಾರದು. ಹೀಗೆ ಮಾಡಿದ್ದಲ್ಲಿ, ಒಣಕೆಮ್ಮು ಹೋಗುತ್ತದೆ. ಇನ್ನು ಕಫದ ಸಮಸ್ಯೆ ಇದ್ದಲ್ಲಿ, ಜೇನುತುಪ್ಪಕ್ಕೆ ಅರಿಶಿನ ಮಿಕ್ಸ್ ಮಾಡಿ, ಸೇವಿಸಿ ಮಲಗಬೇಕು. ಇದಕ್ಕೂ ಅದೇ ರೀತಿ, ಏನನ್ನೂ ಸೇವಿಸದೇ ಮಲಗಿದರೆ, ಕೆಲವೇ ದಿನಗಳಲ್ಲಿ ಕೆಮ್ಮು, ಕಫ ನಿವಾರಣೆಯಾಗುತ್ತದೆ.
ಇನ್ನು ಕಜ್ಜಿ, ಗಾಯ, ತುರಿಕೆ ಮೊಡವೆಗಳಿದ್ದರೆ, ಅಲ್ಲಿ ಅರಿಶಿನ ಹಚ್ಚಿದರೆ, ಆ ಗಾಯವೆಲ್ಲ ಬೇಗ ಮಾಯವಾಗುತ್ತದೆ. ಮುಖ ಕಾಂತಿಯುತವಾಗಿ ಇರಬೇಕು ಅಂದ್ರೆ ಅರಿಶಿನ, ಕೆನೆಯನ್ನು ಮಿಕ್ಸ್ ಮಾಡಿ, ಹಚ್ಚಿದರೆ, ಮುಖದಲ್ಲಿ ಕಾಂತಿ ಬರುತ್ತದೆ. ಆದರೆ ಎಣ್ಣೆ ಮುಖದವರು, ಇದನ್ನು ಬಳಸಬೇಡಿ. ಕೆನೆಯಲ್ಲಿ ಜಿಡ್ಡಿನ ಅಂಶವಿರುವ ಕಾರಣ, ಇದು ಎಣ್ಣೆ ಮುಖದವರಿಗೆ ಸೂಟ್ ಆಗುವುದಿಲ್ಲ.
ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?
ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?