ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮಾಲೂರಿನಲ್ಲಿ ಚುನಾವಣಾ ಕಣ ರಂಗೇರಿದೆ. ಮಾಲೂರು ಶಾಸಕ ಹಾಗೂ ಅಭ್ಯರ್ಥಿ ಕೆ.ವೈ ನಂಜೇಗೌಡ ಕಳೆದ 5 ವರ್ಷಗಳ ಕಾಲ ತನ್ನ ಜನಸೇವೆ ಮೂಲಕ ಮನೆ ಮಾತಾಗಿದ್ದು, ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಯನ್ನು ಸಹ ಮಾಡಿ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಇದೀಗ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಕೆ.ವೈ ನಂಜೇಗೌಡ ಅವರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೆ.ವೈ ನಂಜೇಗೌಡರ ಪರವಾಗಿ ಅವರು ಕುಟುಂಬಸ್ಥರು ಸಹ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರವನ್ನ ಹಮ್ಮಿಕೊಂಡಿದ್ದಾರೆ. ಕೆವೈ ನಂಜೇಗೌಡರ ಇಡೀ ಕುಟುಂಬ 8 ತಂಡಗಳಾಗಿ ವಿಂಗಡನೆಗೊಂಡು ಕೆವೈ ನಂಜೇಗೌಡರ ಕಳೆದ 5 ವರ್ಷಗಳ ಸಾಧನೆಗಳು ಅಭಿವೃದ್ದಿ ಕಾರ್ಯಗಳ ಮೂಲಕ ಪ್ರಚಾರವನ್ನು ನಡೆಸುತ್ತಿದ್ದಾರೆ.
ನಂಜೇಗೌಡರ ಸೊಸೆ ಲೇಖನ ಹರೀಶ್ ಅವರು, ತನ್ನ ಮಾವನ ಪರವಾಗಿ ಬಿಸಿಲನ್ನು ಲೆಕ್ಕಿಸದೆ ಮನೆ ಮನೆಗೆ ಭೇಟಿ ನೀಡಿ ತನ್ನ ಮಾವನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮಾಲೂರು ತಾಲೂಕಿನ ದಿನ್ನಹಳ್ಳಿ ಪಂಚಾಯಿತಿಯ ರಾಂಪುರ, ದಿಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆ ಪ್ರಚಾರವನ್ನ ನಡೆಸುವ ಮೂಲಕ ಮಾವನ ಗೆಲುವಿಗಾಗಿ ಸೊಸೆಯೂ ಸಹ ಶ್ರಮಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ನಂಜೇಗೌಡರ ಸೊಸೆ ಲೇಖನಾ ಹರೀಶ್, ಮನೆ ಮನೆ ಪ್ರಚಾರದ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ನನ್ನ ಮಾವನವರು ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳೇ ಶ್ರೀರಕ್ಷೆ, ಮನೆ ಮನೆ ಪ್ರಚಾರ ವೇಳೆ, ತನ್ನ ಮಗಳಂತೆ ಸ್ವಾಗತಿಸಿ ಅರಿಶಿಣ ಕುಂಕುಮವನ್ನ ನೀಡಿ ಮಹಿಳೆಯರು ಹಾರೈಸುತ್ತಿದ್ದಾರೆ. ಪ್ರಚಾರದ ವೇಳೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ನಮ್ಮ ಮಾವನವರಾದ ಕೆ.ವೈ ನಂಜೇಗೌಡ ಅವರು ಗೆದ್ದೆ ಗೆಲ್ಲುತ್ತಾರೆ. ಈ ಬಾರಿ ಮಾಲೂರಿನಲ್ಲಿ ನಮ್ಮ ಮಾವನವರು ಗೆದ್ದು ಇತಿಹಾಸ ನಿರ್ಮಿಸುವ ಜೊತೆಗೆ ಮಾದರೀ ಕ್ಷೇತ್ರವನ್ನಾಗಿ ಮಾಡುವ ಕನಸ್ಸನ್ನ ಇಟ್ಟುಕೊಂಡಿದ್ದಾರೆ. ಅದಕ್ಕೆ ಕ್ಷೇತ್ರದ ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’
‘ಇಲ್ಲಿ 80 ಕೋಟಿ ಉಚಿತ ರೇಷನ್ ನೀಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಪರದಾಟ’