ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು, ಈ ಪ್ರಯುಕ್ತ ಪುಷ್ಪಾ 2 ಚಿತ್ರದ ಟ್ರೇಲರ್ ಲಾಂಚ್ ಮಾಡಲಾಗಿದೆ. ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ವ್ಯೂಸ್ ಪಡೆದುಕೊಂಡಿದೆ. ಇನ್ನು ಅಲ್ಲು ಫ್ಯಾನ್ಸ್ ಭರ್ಜರಿಯಾಗಿ ತಮ್ಮ ನೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ2 ಟ್ರೇಲರ್ , ಪೋಸ್ಟರ್‌ಗೆ ಹವಾ. ಈ ಪೋಸ್ಟರ್‌ನಲ್ಲಿ ಅಲ್ಲು ಸೀರೆಯುಟ್ಟು, ಮುಖಕ್ಕೆ ನೀಲಿ ಬಣ್ಣ ಬಳಿದುಕೊಂಡು, ನಿಂಬೆಹಾರ ಧರಿಸಿ, ಖಡಖ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಪೋಸ್ಟರ್, ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ, ನಾವೆಲ್ಲ ಪುಷ್ಪಾ 2 ನೋಡಲು ಕಾತುರರಾಗಿದ್ದೇವೆ ಎಂದು ಅಭಿಮಾನಿಗಳು, ಚಿತ್ರರಂಗದವರು ಹೇಳಿದ್ದಾರೆ. ಆದ್ರೆ ಓರ್ವ ಪುಟ್ಟ ಅಭಿಮಾನಿ ಅಲ್ಲು ಅರ್ಜುನ್ ಬರ್ತ್‌ಡೇಗೆ ಸಖತ್ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ಅದು ಯಾರಂದ್ರೆ ಕ್ರಿಕೇಟಿಗ ಡೇವಿಡ್ ವಾರ್ನರ್ ಮಗಳು ಇಸ್ಲಾ.
ಡೇವಿಡ್ ವಾರ್ನರ್ ಐಪಿಎಲ್‌ಗೆ ಸೆಲೆಕ್ಟ್ ಆದ ಬಳಿಕ, ಭಾರತೀಯರೇ ಆಗಿ ಹೋಗಿದ್ದಾರೆ. ನೀವು ಅವರ ಇನ್‌ಸ್ಟಾಗ್ರಾಮ್ ಓಪೆನ್ ಮಾಡಿದ್ರೆ, ಅಲ್ಲಿ ವಾರ್ನರ್ ತಾವು ಕನ್ನಡ, ತೆಲುಗು, ತಮಿಳು, ಹಿಂದಿ ಹಾಡಿಗೆ ಸ್ಟೆಪ್ ಹಾಕುವುದಲ್ಲದೇ, ತಮ್ಮ ಪತ್ನಿ ಮತ್ತು ಪುತ್ರಿಯರನ್ನ ಸೇರಿಸಿಕೊಂಡು ರೀಲ್ಸ್ ಮಾಡೋದನ್‌ನ ನೀವು ಕಾಣಬಹುದು. ಅದರಲ್ಲೂ ಪುಷ್ಪ ಸಿನಿಮಾ ರಿಲೀಸ್ ಆದ ಮೇಲೆ, ಶ್ರೀವಲ್ಲಿ, ಅಡ್ಡಾ ಹಾಡಿಗೆ ಸ್ಟೆಪ್ ಹಾಕಿದ್ದ ವಾರ್ನರ್, ಕೆಲವು ಆ್ಯಪ್ ಬಳಸಿ, ತಾವೂ ಆ ಹಾಡಿನಲ್ಲಿ ಆ್ಯಕ್ಟ್ ಮಾಡಿದಂತೆ ರೀಲ್ಸ್ ತಯಾರಿಸಿದ್ದರು. ಇದಕ್ಕೆ ಅಲ್ಲು ಅರ್ಜುನ್ ಕೂಡ ಧನ್ಯವಾದ ಎಂದು ಕಾಮೆಂಟ್ ಮಾಡಿದ್ದರು.
ಈಗ ಪುಷ್ಪ 2 ಟ್ರೇಲರ್, ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ, ವಾರ್ನರ್ ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು, ಅಲ್ಲು ಅರ್ಜುನ್‌ಗೆ ವಿಶ್ ಮಾಡಿದ್ದಾರೆ. ನನಗೆ ಇನ್ನು ವೇಯ್ಟ್ ಮಾಡಲು ಸಾಧ್ಯವಿಲ್ಲ. ಪುಷ್ಪಾ2 ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಇವರ ಮಗಳು ಇಸ್ಲಾ ಕೂಡ ಅಲ್ಲು ಅರ್ಜುನ್‌ಗೆ ವಿಶ್ ಮಾಡಿದ್ದು, ತನ್ನದೇ ಸ್ಟೈಲಿನಲ್ಲಿ ಹ್ಯಾಪಿ ಬರ್ತ್‌ಡೇ ಪುಷ್ಪಾ ಎಂದಿದ್ದಾರೆ. ಈ ವೀಡಿಯೋ ಸಖತ್ ಕ್ಯೂಟ್ ಆಗಿದೆ. ಇಲ್ಲಿ ಕ್ಲಿಕ್ ಮಾಡಿದ್ರೆ ಈ ವೀಡಿಯೋವನ್ನು ನೀವು ಕಾಣಬಹುದು.
‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’