Thursday, November 21, 2024

Latest Posts

ಹಿಂದಿ ರಾಷ್ಟçಭಾಷೆ ಅಲ್ಲ ಅಂದ ಕಿಚ್ಚನ ಮಾತಿಗೆ ಸಿಕ್ತು ಪ್ರಧಾನಿ ಮೋದಿ ಮನ್ನಣೆ..!

- Advertisement -

ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್ ರೈಟ್ ಅಂತ ಹೇಳಿದ್ದಾರೆ.
ನಾನು ಗಮನಿಸಿದ್ದೇನೆ, ಕೆಲವು ದಿನಗಳಿಂದ ಭಾಷೆಯ ನಡುವೆ ವಿಷಬೀಜ ಬಿತ್ತುವ ಕೆಲಸ ನಡೀತಿದೆ. ದೇಶದ ಪ್ರತಿ ಭಾಷೆಯನ್ನು ದೇಶದ ಆತ್ಮವಾಗಿ ನೋಡುತ್ತೆ. ಅಂತ ಮೋದಿ ಪರೋಕ್ಷವಾಗಿ ಹೇಳಿದ್ದು ಅಜೆಯ್ ಕಿಚ್ಚ ಟ್ವೀಟ್ ವಾರ್ ಭಾರೀ ಸುದ್ದಿಯಾಗಿದ್ದ ಕಾರಣಕ್ಕೆ. ಆವತ್ತು ನಮ್ಮ ಕಿಚ್ಚ ಸುದೀಪ್ ಆಡಿದ್ದ ಮಾತು ವಿ ಲವ್ ಯೂ ಕಿಚ್ಚ ಸುದೀಪ್ ಅಂತ ಇಡೀ ಕರ್ನಾಟಕ ಹೇಳಿತ್ತು.. ಯಾಕಂದ್ರೆ ಸುದೀಪ್ ಒಂದು ಟ್ವೀಟ್ ಮಾಡಿದ್ರು
ಅಜೆಯ್ ಸರ್.. ನೀವು ಹಿಂದಿಯಲ್ಲಿ ಟ್ವೀಟ್ ಮಾಡಿದ್ರಿ, ನಾವು ಹಿಂದೀನಾ ಕಲಿತಿದ್ದೀವಿ, ಅರ್ಥಮಾಡಿಕೊಂಡಿದ್ದೀವಿ, ಗೌರವಿಸ್ತೀವಿ, ಅದಕ್ಕೆ ನಾನು ಟ್ವೀಟ್ ನೋಡಿ ಉತ್ತರ ಕೊಟ್ಟೆ. ಎಲ್ಲಿಯಾದ್ರೂ ನಾನು ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ ಹೇಗಿರುತ್ತೆ ಹೇಳಿ, ನಾವೂ ಕೂಡ ಇಂಡಿಯಾಗೇ ಸೇರಿದವ್ರೇ ಅಲ್ವಾ ಸರ್ ಅಂತ ಕೇಳಿದ ಸುದೀಪ್ ಟ್ವೀಟಲ್ಲಿ..
ಗೀವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ಅನ್ನೋ ಖಡಕ್ ಮಾತು ಸ್ವೀಟಾಗಿತ್ತು ಅಷ್ಟೇ.. ಅದೇ ಹಳೆ ಚಪ್ಲೀನಾ ಹೊಸ ರೇಶ್ಮೆ ಬಟ್ಟೆ ಸುತ್ಕೊಂಡು ಹೊಡ್ಯೋದು ಅಂತಾರಲ್ಲ ಹಂಗಿತ್ತು. ಕೂಡ್ಲೇ ಇದನ್ನು ಅರ್ಥಮಾಡ್ಕೊಂಡ ಅಜೆಯ್ ದೇವಗನ್ ಸಾರಿ ಒಂದು ಕೇಳಲಿಲ್ಲ ಬಿಟ್ರೆ ತಪ್ಪಾಗಿ ಅರ್ಥಮಾಡ್ಕೊಂಡೆ ಅಂತ ಗೋಳಾಡಿದ್ರು. ಇದಲ್ವಾ ಕನ್ನಡದ ಪವರ್ ಕನ್ನಡಿಗರ ಪವರ್ ಅಂದ್ರೆ ಸ್ವೀಟಾಗಿ ಮಾತಾಡೀನೇ ನೀಟಾಗಿ ಡೀಲ್ ಮಾಡೋದು ಅಂದ್ರೆ.

ಓO, ಕರ್ನಾಟಕ ಟಿವಿ

 

- Advertisement -

Latest Posts

Don't Miss