Tuesday, May 28, 2024

Latest Posts

ಪತ್ರಕರ್ತರಿಗೆ ಹೆದರಿ ಸುದ್ದಿಗೋಷ್ಠಿಯನ್ನೇ ಮಾಡದ ಏಕೈಕ ಪ್ರಧಾನಿ ನರೇಂದ್ರ ಮೋದಿ: ಸಿಎಂ ಸಿದ್ದರಾಮಯ್ಯ

- Advertisement -

Political News: ಇಂದು ಮೈಸೂರು ನಗರದಲ್ಲಿ ಆಯೋಜಿಸಿದ್ದ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ನಿಮ್ಮ – ನಮ್ಮೆಲ್ಲರ ಧ್ವನಿ. ಲಕ್ಷ್ಮಣ್ ಗೆಲ್ಲುವುದು ಖಚಿತ. ಲಕ್ಷ್ಮಣ್ ಗೆದ್ದರೆ ನಾನು, ನೀವು ಗೆದ್ದಂತೆ. ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸಂಸ್ಕಾರ. ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವುದು ಬಿಜೆಪಿ ಸಂಸ್ಕಾರ. ಬಿಜೆಪಿಯನ್ನು ನಿರಂತರವಾಗಿ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬೀದಿ ಹೋರಾಟಗಳ ಮೂಲಕ ಬೆಳೆದವರು ಲಕ್ಷ್ಮಣ್ ಎಂದು ಸಿಎಂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಇಡಿ ದೇಶದ ಜನರಿಗೆ ಹೇಳಿದ ಸುಳ್ಳುಗಳು ನಿಮಗೆ ಗೊತ್ತಿಲ್ಲವೇ? ಮೋದಿಯವರು ಕಳೆದ 10 ವರ್ಷಗಳಲ್ಲಿ ಒಂದೇ ಒಂದು ದಿನ ಈ ದೇಶದ ನಿರುದ್ಯೋಗ ಸಮಸ್ಯೆ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಗೊಬ್ಬರದ ಬೆಲೆ ದುಬಾರಿಯಾಗಿರುವ ಬಗ್ಗೆ ಬಾಯಿಯನ್ನೇ ಬಿಟ್ಟಿಲ್ಲ. ಪತ್ರಕರ್ತರಿಗೆ ಹೆದರಿ ಇವತ್ತಿನವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಏಕೈಕ ಪ್ರಧಾನಮಂತ್ರಿ ಎಂದರೆ ನರೇಂದ್ರ ಮೋದಿ ಅವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”: ಪ್ರೀತಂಗೌಡ ವ್ಯಂಗ್ಯ

ಮೈಮೇಲೆ Rs.500/- ನೋಟು ಇಟ್ಟು ಮಲಗಿದ ರಾಜಕಾರಣಿ ಫೋಟೋ ವೈರಲ್.. ಆದರೆ ಸತ್ಯವೇ ಬೇರೆ..

ಮೆದುಳು ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜಗ್ಗಿ ವಾಸುದೇವ್ ಗುರೂಜಿ

- Advertisement -

Latest Posts

Don't Miss