ಕಳೆದ 2022 ಮತ್ತು 2023 ರ ಪ್ರಾರಂಭದಿಂದ ಇಲ್ಲಿಯವರಗೂ ಅಡುಗೆ ಮಾಡಲು ಬಳೆಸುವ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಬಂದಿದೆ ಇದರಿಂದ ಸಾಮಾನ್ಯ ಜನ ತತ್ತರಿಸಿ ಹೊಗಿದ್ದಾರೆ. ಆದರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಏಪ್ರೀಲ್ ಒಂದರಿಂದ ಹೊಸ ಆರ್ಥೀಕ ನೀತಿ ಆರಂಭವಾಗಿದೆ ಹಾಗಾಗಿ ಊಟ ಮಾಡಲು ಅಧಿಕ ಬಿಸಿ ಅನುಭವಿಸುತಿದ್ದ ಸಾಮಾನ್ಯ ಜನರಿಗೆ ಕೊಂಚ ಅಡುಗೆ ಸಿಲಿಂಡರ್ ಬೆಲೆ ಇಳಿಕೆಯಿಂದಾಗೆ ಬಿಸಿ ಕಡಿಮೆಯಾಗಿದೆ.
ಕಳೆ ತಿಂಗಳು ಮಾರ್ಚ್ 1ರಂದು ವಾಣಿಜ್ಯ ಸಿಲಿಂಡರ್ ಗಳ ಬೆಲೆ 350 ರೂಪಾಯಿ 50 ಪೈಸೆ ಹಾಗೂ ಮನೆಬಳಕೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿತ್ತು. ಜನವರಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 25 ರೂಪಾಯಿ ಹೆಚ್ಚಳವಾಗಿತ್ತು. 19 ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಬೆಲೆ 91 ರೂಪಾಯಿ 50 ಪೈಸೆ ಕಡಿಮೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 2,028 ರೂಪಾಯಿಗಳಾಗಿದೆ.
ಆದರೆ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. 2022 ರಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಯಿತು. ಈ ವರ್ಷದ ಜನವರಿಯಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ದೆಹಲಿಯಲ್ಲಿ 1,768 ರೂಪಾಯಿಗೆ ಹೆಚ್ಚಿಸಲಾಗಿತ್ತು.
ಭಾರತದಲ್ಲಿ LPG ಬೆಲೆಗಳನ್ನು ದೇಶೀಯ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ. ಪ್ರತಿ ತಿಂಗಳು ಬೆಲೆಯಲ್ಲಿ ಪರಿಷ್ಕರಣೆಯಾಗುತ್ತಿರುತ್ತದೆ. ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲ ವೆಚ್ಚಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಪ್ರತಿ ಕುಟುಂಬವು ವರ್ಷಕ್ಕೆ ಸಬ್ಸಿಡಿ ದರದಲ್ಲಿ 12 ಸಿಲಿಂಡರ್‌ಗಳಿಗೆ ಅರ್ಹವಾಗಿರುತ್ತದೆ. ಇದನ್ನು ಮೀರಿ, ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬಹುದಾಗಿದೆ.
ಚೆಕ್ ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಹೆಚ್.ಡಿ.ಕುಮಾರಸ್ವಾಮಿ