Wednesday, July 9, 2025

Latest Posts

National Political News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

- Advertisement -

National Political News: ಕೇಂದ್ರ ಸರ್ಕಾರ ಈ- ಡ್ರೈವ್ ಯೋಜನೆಯಡಿ ದೇಶದ 5 ಪ್ರಮುಖ ನಗರಗಳಿಗೆ 11 ಸಾವಿರ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮುಂದಾಗಿದೆ. ಬೆಂಗಳೂರು, ದೆಹಲಿ ಸೇರಿ ಹಲವು ಪ್ರಮುಖ ನಗರಳಿಗೆ ಈ ಯೋಜನೆ ಲಭಿಸಲಿದ್ದು, ಬೆಂಗಳೂರಿಗೆ 4,500 ಬಸ್‌ಗಳು ಹಂಚಿಕೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಿಎಂ ಈ- ಡ್ರೈವ್ ಯೋಜನೆಯಡಿ ಕೆಲವು ನಗರಗಳಿಗೆ ಎಲೆಕ್ಟ್ರಿಕ್ ಬಸ್ ಹಂಚಿಕೆಯಾಗುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ 11 ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ನೀಡುವ ಬಗ್ಗೆ ಮಾತುಕತೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಈ ಸಭೆಯ ಬಳಿಕ ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಬೆಂಗಳೂರಿಗೆ 4,500 ಬಸ್‌ಗಳು, ಹೈದರಾಬಾದ್‌ಗೆ 2000, ದೆಹಲಿ 2,800, ಅಹಮದಾಾಬಾದ್‌ 1000, ಸೂರತ್‌ಗೆ 600 ಎಲೆಕ್ಟ್ರಿಕ್ ಬಸ್ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛವಾಗಿರಿಸಲು, ಹೆಚ್ಚು ಪರಿಣಾಮಕಾರಿಯಾಗಿರಿಸಲು ಬೆಂಗಳೂರು, ದೆಹಲಿ ಸೇರಿ ಹಲವು ನಗರಗಳು ಎಲೆಕ್ಟ್ರಿಕ್ ಬಸ್ ಸಕ್ರೀಯವಾಗಿ ಅಳವಡಿಸಿಕ“ಳ್ಳುತ್ತಿದೆ. ಕೇವಲ ಎಲೆಕ್ಟ್ರಿಕ್ ಬಸ್ ಗಳನ್ನು ಮಾತ್ರ ನಾವು ಹಂಚಿಕೆ ಮಾಡುತ್ತಿಲ್ಲ. ಬದಲಾಗಿ ದೇಶದ ಸಾರಿಗೆಯ ಭವಿಷ್ಯವನ್ನು ನಾವೀನ್ಯತೆ ಮತ್ತು ಪರಿಸರ ಪ್ರಜ್ಞೆಯ ಜತೆ ರೂಪಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನು ಪಿಎಂ ಇ-ಡ್ರೈವ್ ಯೋಜನೆಯಡಿ  2024ರ ಏಪ್ರಿಲ್‌ನಿಂದ 2026ರ ಮಾರ್ಚ್ ತನಕ 2 ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂಪಾಯಿ ವೆಚ್ಚದಲ್ಲಿ 14,028 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

- Advertisement -

Latest Posts

Don't Miss