Sunday, December 22, 2024

Latest Posts

National Political news: ಬಿಹಾರ್- ಆಂಧ್ರಪ್ರದೇಶಕ್ಕೆ ಕೇಂದ್ರ ಬಜೆಟ್‌ನಲ್ಲಿ ಬಂಪರ್

- Advertisement -

National Political news: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿದ್ದು, ಈ ಬಾರಿ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

  • ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲಿಡಲಾಗಿದ್ದು, ದೇಶದ 100 ಡಿಜಿಟಲ್ ಸರ್ವೆಗೆ ಒತ್ತು ನೀಡಲಾಗಿದೆ. 10 ಸಾವಿರ ಬಯೋ ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಿದ್ದು, ತರಕಾರಿ ಬೆಳೆಗಳ ಸಂಗ್ರಹಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ತರಕಾರಿ ಬೆಳೆಗಳ ಸಂಗ್ರಹಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು,  ಕೃಷಿ ಸಂಶೋಧನೆಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ. ಅಷ್ಟೇ ಅಲ್ಲದೇ, ಪ್ರಕೃತಿ ವಿಕೋಪಕ್ಕಾಗಿ ರೈತರಿಗೆ ಒಂದು ಕೋಟಿ ಮೀಸಲಿಡಲಾಗಿದೆ.
  • ಇನ್ನು ಉನ್ನತ ಶಿಕ್ಷಣ ಪುಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷದವರೆಗೆ ಸಾಲ ನೀಡಲು ಈ ಬಾರಿ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ. ಯಾವುದೇ ಉನ್ನತ ಶಿಕ್ಷಣ ಪಡೆಯುವುದಿದ್ದರೂ, ವಿದ್ಯಾರ್ಥಿಗಳು 10 ಲಕ್ಷ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ.
  • ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 3 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉದ್ಯೋಗ ಸೃಷ್ಟಿಗಾಗಿ ಮೂರು ಕೌಸಲ್ಯ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.
  • ಇನ್ನು ಎನ್‌ಡಿಎ ಮಿತ್ರ ಪಕ್ಷದ ನಾಯಕರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ರಾಜ್ಯಗಳಿಗೆ ಪ್ರಧಾನಿ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಬಿಹಾರದಲ್ಲಿ ಹೊಸ ಏರ್ಪೋರ್ಟ್ ಮಮತ್ತು ಮೆಡಿಕಲ್ ಕಾಲೇಜು ಮಾಡಲು ಅನುಮತಿ ಕೊಟ್ಟಿದ್ದು, ಕೋಟಿ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಆಂಧ್ರಪ್ರದೇಶ ಪುನರ್‌ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, 26 ಸಾವಿರ ಕೋಟಿ ವೆಚ್ಚದಲ್ಲಿ ರೈಲ್ವೆ ಯೋಜನೆಗಳ ಆರಂಭ ಮಾಡಲಾಗುತ್ತಿದೆ.
  • ಇನ್ನು ಎಸ್‌ಎಸಿ ಎಸ್‌ಎಸ್ಟಿ, ಕುಶಲಕರ್ಮಿಗಳಿಗೆ ಹೆಚ್ಚಿನ ನೆರವು, ರಸ್ತೆಗಳ ಅಭಿವೃದ್ಧಿಗೆ 26 ಸಾವಿರ ಕೋಟಿ ಮೀಸಲು, 21,400 ಕೋಟಿ ವೆಚ್ಚದಲ್ಲಿ ವಿದ್ಯುತ್‌ಚ್ಛಕ್ತಿ ಅಭಿವೃದ್ಧಿಗಾಗಾಗಿ ಮೀಸಲಿಡಲಾಾಗುತ್ತಿದೆ. ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ನೀಡಲಾಗಿದ್ದು, ಮುದ್ರಾಲೋನ್ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿಗಾಗಿ 2.66 ಲಕ್ಷ ಕೋಟಿ ಅನುದಾನ ನೀಡಲಾಾಗಿದೆ.
  • 1 ಕೋಟಿ ಯುವಕರಿಗೆ 500 ದೊಡ್ಡ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ತಿಂಗಳಿಗೆ 5 ಸಾಾವಿರ ವೇತನ ನೀಡಲಾಗುವುದು. ಉದ್ಯೋಗ ಸೃಷ್ಟಿಗೆ ಶಿಫ್ಟಿಂಗ್ ಉದ್ಯಮಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕೈಗಾರಿಕಾ ನೌಕರರಿಗೆ ಡಾರ್ಮೆಂಟರಿ ರೀತಿ, ಪಿಪಿಪಿ ಮಾದರಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
  • ಇನ್ನು 12 ಇಂಡಸ್ಟ್ರಿಯಲ್ ಪಾರ್ಕ್‌ಗಳ ಸ್ಥಾಪನೆ ಮಾಡಲು ಅನುಮತಿ ನೀಡಲಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

- Advertisement -

Latest Posts

Don't Miss