National Politics: ಬಿಹಾರದ ನೂತನ ಸಿಎಂ ಆಗಿ ಆಯ್ಕೆ ಆದ ಬಿಜೆಪಿಯ ಸಾಮ್ರಾಟ್ ಚೌಧರಿ

National Politics: ಬಿಹಾರದ ನೂತನ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇದೇ ಪ್ರಥಮ ಬಾರಿಗೆ ಬಿಹಾರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಿಎಂ ಆಗಿದ್ದು, ಇಷ್ಟು ವರ್ಷಗಳಲ್ಲಿ ಈಗ ಕಾಲ ಕೂಡಿ ಬಂದಿದೆ.

ಘೋಷಣೆ ಬಳಿಕ ಮಾತನಾಡಿರುವ ಸಾಮ್ರಾಟ್, ನಾನಿಂದು ಆದರಣೀಯ ಪ್ರಧಾನ ಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ, ರಾಷ್ಟ್ರೀಯ ಅಧ್ಯಕ್ಷರಿಗೆ, ಸಂಘಟನೆಯ ಮಹಾಮಂತ್ರಿ ಬಿ.ಎಲ್.ಸಂತೋಷ್ ಅವರಿಗೆ, ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಭಾರತವೇ ಎಲ್ಲಕ್ಕಿಂತ ಶ್ರೇಷ್ಟ ಎನ್ನುವ ಬಿಜೆಪಿಗಾಗಿ ಇವರೆಲ್ಲರ ವಿಚಾರಧಾರೆಯ ರೀತಿ ನಾನು ಸದಾ ಪಕ್ಷದ ಹಿತಕ್‌ಕಾಗಿ ದುಡಿಯುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಅಲ್ಲದೇ, ಆದರಣೀಯ ನಿತೀಶ್ ಕುಮಾರ್ ಅವರು ನನಗೆ ತುಂಬಾ ವಿಚಾರಗಳನ್ನು ಹೇಳಿದ್ದಾರೆ. ಹೇಗೆ ಸರ್ಕಾರವನ್ನು ಚಲಾಯಿಸಬೇಕು..? ಬಿಹಾರದಲ್ಲಿ ಹೇಗೆ ಉತ್ತಮ ಆಡಳಿತ ನಡೆಸಬೇಕು..? ಬಿಹಾರದ ಲೋಕತಂತ್ರಕ್ಕಾಗಿ ಏನು ಉತ್ತಮ..? ಇದೆಲ್ಲವನ್ನೂ ಅವರು ತಿಳಿಸಿ ಹೇಳಿದ್ದಾರೆಂದು ಸಾಮ್ರಾಟ್ ಹೇಳಿದ್ದಾರೆ.

ವಿಕಸಿತ ಭಾರತದ ಕನಸಿನಂತೆ, ಸಮೃದ್ಧ ಬಿಹಾರವೆಂಬ ನಿತೀಶ್ ಕುಮಾರ್ ಅವರ ಆಸೆಯಂತೆ ನಾವೆಲ್ಲರೂ ಸೇರಿ, ನಮ್ಮ ರಾಜ್ಯವನ್ನು ಅತೀ ಉತ್ತಮವಾಗಿಸೋಣವೆಂದು ಸಾಮ್ರಾಟ್ ಹೇಳಿದ್ದಾರೆ.

About The Author