ನಾವೆಲ್ಲ ಮುಂದೆ 1 ದಿನ ಸಾವನ್ನಪ್ಪಲೇಬೇಕು. ಇದು ನಿಶ್ಚಿತ.. ಹಿಂದೂ ಧರ್ಮದಲ್ಲಿ ಜನನದಿಂದ ಸಾವಿನವರೆಗೂ, ಸತ್ತ ನಂತರವೂ ಕೆಲ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅಂತ ಪದ್ಧತಿಗಳಲ್ಲಿ ಸಾವಾದಾಗ ಆ ಮನೆಯ ಕನ್ನಡಿಗಳನ್ನು ಮುಚ್ಚುವುದು. ಮತ್ತು 13ನೇ ದಿನದ ಕ್ರಿಯೆಯಾಗುವವರೆಗೂ ಆ ಪರದೆ ಸರಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಸಾವಿನ ಮನೆಯಲ್ಲಿ ಕನ್ನಡಿಗೆ ಪರದೆ ಮುಚ್ಚಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಕೆಲವು ಮನೆಗಳಲ್ಲಿ ಸಾವಾದಾಗ, ಕನ್ನಡಿಯನ್ನು ವಸ್ತ್ರದಿಂದ ಮುಚ್ಚಲಾಗುತ್ತದೆ. ಏಕೆಂದರೆ, ಕೆಲವು ಬಾರಿ ತನ್ನವರ ಬಳಿ ಓಡಾಡುವ ಆತ್ಮದ ಪ್ರತಿಬಿಂಬ ಕನ್ನಡಿಯಲ್ಲಿ ಕಾಣುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಆ ಅನುಭವವೂ ಆಗಿದೆ. ಈ ಕಾರಣಕ್ಕೆ ಕನ್ನಡಿಯನ್ನು ವಸ್ತ್ರದಿಂದ ಕವರ್ ಮಾಡಲಾಗುತ್ತದೆ.
ಇದಲ್ಲದೇ, ಎರಡನೆಯ ಕಾರಣವೂ ಇದೆ. ಸತ್ತ ಬಳಿಕ ಆತ್ಮ 3 ಗಂಟೆಗಳ ಕಾಲ ಮನೆಯಲ್ಲೇ ಓಡಾಡುತ್ತದೆ. ಏಕೆಂದರೆ, ಮನುಷ್ಯನ ಸಾವಾದಾಗ, ತನ್ನ ಸಾವನ್ನು ನಂಬುವ ಸ್ಥಿತಿಯಲ್ಲಿ ಮನುಷ್ಯನಿರುವುದಿಲ್ಲ. ಹಾಗಾಗಿ ಆತ ತನ್ನ ಮನೆಯಲ್ಲೇ ಸುತ್ತುತ್ತಾನೆ. ತನ್ನವರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾನೆ. bಸ್ತಪಗಳನ್ನು ಮುಟ್ಟುವ ಪ್ರಯತ್ನ ಮಾಡುತ್ತಾನೆ. ಆದರೆ ಇದ್ಯಾವುದು ಸಾಧ್ಯವಾಗುವುದಿಲ್ಲ.
ಅಲ್ಲದೇ, ಸತ್ತ ವ್ಯಕ್ತಿಯ ಆತ್ಮ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಲು ಪ್ರಯತ್ನಿಸುತ್ತದೆ. ಕನ್ನಡಿಯಲ್ಲಿ ಪ್ರತಿಬಿಂಬ ಕಾಣ ಸಿಗದಿದ್ದಲ್ಲಿ, ಆತ್ಮ ಚಡಪಡಿಸುತ್ತದೆ. ಇದನ್ನು ಪ್ರತಿಬಿಂಬ ಮೋಹ ಎನ್ನುತ್ತಾರೆ. ಇಂಥ ಆತ್ಮಗಳು ಮನೆ ಬಿಡಲು ಇಚ್ಛಿಸುವುದಿಲ್ಲ. ಅಂಥ ಆತ್ಮಗಳು ಕನ್ನಡಿಯಲ್ಲಿ ಹೋಗಲು ಯತ್ನಿಸುತ್ತದೆ. ಹಾಗೆ ಹೋಗಿ, ಕನ್ನಡಿಯ ಮೋಹದಲ್ಲಿ ಬಿದ್ದ ಆತ್ಮಗಳು, ಮುಕ್ತಿ ಸಿಗದೇ, ಅದೇ ಮನೆಯಲ್ಲಿ ಇರುತ್ತದೆ ಅನ್ನೋ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ಸತ್ತ ಮನೆಯಲ್ಲಿ ಕನ್ನಡಿಯನ್ನು ವಸ್ತ್ರದಿಂದ ಕವರ್ ಮಾಡಲಾಗುತ್ತದೆ.




