Friday, November 14, 2025

Latest Posts

ಹರಿಯಾಣಾದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ

- Advertisement -

National Political News: ಇಂದು ಬೆಳಿಗ್ಗೆ ಸೀಟ್ ಹಂಚಿಕೆ ವಿಚಾರವಾಗಿ, ಹರಿಯಾಣದಲ್ಲಿ ಬಿಜೆಪಿ ಮಧ್ಯೆ ಮನಸ್ತಾಪ ಉಂಟಾಗಿ, ಸಿಎಂ ಸ್ಥಾನದಲ್ಲಿದ್ದ ಮನೋಹರ್ ಲಾಲ್ ಖಟ್ಟರ್, ರಾಜೀನಾಮೆ ನೀಡಿದ್ದರು.

ಇದೀಗ ಹರಿಯಾಣಾದ ನೂತನ ಸಿಎಂ ಆಗಿ, ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಸೈನಿಯೊಂದಿಗೆ ಕನ್ವರ್ ಲಾಲ್, ಮೂಲ್‌ಚಂದ್ ಶರ್ಮಾ, ಜಯಪ್ರಕಾಶ್ ದಲಾಲ್, ಬನ್ವರಿ ಲಾಲ್, ಪಕ್ಷೇತರ ಅಭ್ಯರ್ಥಿ ರಂಜೀತ್ ಸಿಂಗ್ ಚೌಟಾಲ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಿಜೆಪಿ ಮುಖ್ಯಸ್ಥ, ಓಬಿಸಿ ನಾಯಕ, ಮನೋಹರ್ ಲಾಲ್ ಖಟ್ಟರ್ ಆಪ್ತನಾಗಿರುವ ಸೈನಿಗೆ ಸಿಎಂ ಸ್ಥಾನ ಕೊಡುವ ಮೂಲಕ, ಬಿಜೆಪಿ ಹರಿಯಾಣದಲ್ಲಿ ಇದ್ದ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಿದೆ. ಇಂದು ಬೆಳಿಗ್ಗೆ ಬಿಜೆಪಿಗರ ಮಧ್ಯೆಯೇ ಮನಸ್ತಾಪವಿದ್ದು, ಖಟ್ಟರ್‌ಗೆ ರಾಜೀನಾಮೆ ನೀಡಲು ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಹಾಗಾಗಿ ಖಟ್ಟರ್ ಸೇರಿ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಜೆ ವೇಳೆಗೆ ಹೊಸ ಸಿಎಂ ಘೋಷಿಸಿದ್ದು, ಖಟ್ಟರ್ ಆಪ್ತನೇ ಸಿಎಂ ಆಗಿದ್ದು, ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಎಲ್ಲ ಸಾಧ್ಯತೆ ಇದೆ.

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss