Saturday, July 5, 2025

Latest Posts

ಬಿಪಿ ಕಂಟ್ರೋಲ್ ಮಾಡಬೇಕೇ..? ಹಾಗಾದ್ರೆ ಈ ಆಹಾರ ಸೇವಿಸಿ

- Advertisement -

Health Tips: ಬಿಪಿ ಕಂಟ್ರೋಲ್ ಮಾಡಬೇಕು ಅಂದ್ರೆ, ಅದಕ್ಕೆ ಸರಿಯಾದ ಆಹಾರ ಸೇವನೆ ಮಾಡಬೇಕಾಗುತ್ತದೆ. ಬಿಪಿ ನಾರ್ಮಲ್ ಆಗಿರುವ ರೋಗವಾದರೂ, ಬಿಪಿಯನ್ನು ಅಷ್ಟು ನಾರ್ಮಲ್ ಆಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಬಿಪಿ ಲೋ, ಅಥವಾ ಹೈ ಆದ್ರೆ, ಹಾರ್ಟ್ ಅಟ್ಯಾಕ್, ಬ್ರೇನ್ ಹ್ಯಾಮರೇಜ್ ಸೇರಿ, ಹಲವು ಜೀವಹಾನಿಗಳಾಗುತ್ತದೆ. ಹಾಗಾಗಿ ನೀವು ಬಿಪಿಯನ್ನು ಕಂಟ್ರೋಲ್ ಮಾಡಲೇಬೇಕು. ಹಾಗಾದ್ರೆ ಬಿಪಿ ಕಂಟ್ರೋಲ್ ಮಾಡಲು ನೀವು ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ಹಸಿರು ಸೊಪ್ಪು: ಹಸಿರು ಸೊಪ್ಪು ಅಂದ್ರೆ ಪಾಲಕ್, ಹರಿವೆ, ಮೆಂತ್ಯೆ, ಸಬ್ಬಸಿಗೆ ಸೇರಿ ಹಸಿರು ಸೊಪ್ಪುಗಳ ಸೇವನೆ ಮಾಡಬೇಕು. ಆದರೆ ಕೆಲವರಿಗೆ ಈ ಎಲ್ಲ ಸೊಪ್ಪುಗಳ ಸೇವನೆಯಿಂದ ಒಬ್ಬರಿಗೆ ಒಂದೊಂದು ರೀತಿಯ ಅಲರ್ಜಿ ಇರುತ್ತದೆ ಅಂಥವರು, ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ. ಈ ಹಸಿರು ಸೊಪ್ಪುಗಳ ಸೇವನೆಯಿಂದ, ಆರೋಗ್ಯ ಉತ್ತಮವಾಾಗಿರುತ್ತದೆ. ಬಿಪಿ ಕಂಟ್ರೋಲಿಗೆ ಬರುತ್ತದೆ.

ಹಸಿರು ತರಕಾರಿ: ಹಸಿರು ತರಕಾರಿ ಎಂದರೆ, ಬ್ರೋಕೋಲಿ, ಎಲೆಕೋಸು ಸೇರಿ ಹಲವು ಹಸಿರು ತರಕಾರಿಗಳ ಸೇವನೆಯಿಂದ ಬಿಪಿ ಕಂಟ್ರೋಲಿಗೆ ಬರುತ್ತದೆ.

ಬೀಟ್‌ರೂಟ್: ಬೀಟ್‌ರೂಟನ್ನು ಹಸಿಾಗಿ ತಿಂದಷ್ಟು ಆರೋಗ್‌ಯಕ್ಕೆ ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಜ್ಯೂಸ್ ಕುಡಿಯಬೇಕು. ಅಥವಾ ಬೀಟ್‌ರೂಟ್ ಪಲ್ಯ, ಸಾಂಬಾರ್ ಮಾಡಿ ಸವಿಯಬಹುದು. ಅಥವಾ ನೀವು ಚಪಾತಿ, ದೋಸೆ ಮಾಡುವಾಗ, ಬೀಟ್‌ರೂಟ್ ರಸವನ್ನು ಆ ಹಿಟ್ಟಿಗೆ ಸೇರಿಸಿದರೆ, ಆ ತಿಂಡಿ ಆರೋಗ್ಯಕರವಾಗುತ್ತದೆ.

ಡ್ರೈಫ್ರೂಟ್ಸ್, ನಟ್ಸ್: ಡ್ರೈಫ್ರೂಟ್ಸ್, ನಟ್ಸ್ ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದಲೂ ಬಿಪಿ ಕಂಟ್ರೋಲಿಗೆ ಬರುತ್ತದೆ. ಬಾದಾಮಿ, ಅಖ್ರೋಟ್, ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ, ಆರೋಗ್ಯ ಉತ್ತಮವಾಗಿರುತ್ತದೆ.

- Advertisement -

Latest Posts

Don't Miss