Hubli News: ಹುಬ್ಬಳ್ಳಿ: ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣ ಸುದ್ದಿ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ನೇಹಾ ಮತ್ತು ಫಯಾಜ್ ಇಬ್ಬರ ರೀಲ್ಸ್ ವೈರಲ್ ಆಗುತ್ತಿದೆ.
ನೇಹಾ ಮತ್ತು ಫಯಾಜ್ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ, ಮತ್ತು ಸ್ನೇಹದ ವೇಳೆ ನೇಹಾ ಮತ್ತು ಫಯಾಜ್ ಒಟ್ಟಿಗೆ ಇರುವ ಫೋಟೋ, ವೀಡಿಯೋಗಳು ವೈರಲ್ ಆಗಿದೆ.
ಆರೋಪಿ ಪ್ರಕಾರ ಬಿಸಿಎ ಓದುವಾಗಿನಿಂದ ನೇಹಾ (Neha Hiremath) ಮತ್ತು ಫಯಾಜ್ ಲವ್ ಮಾಡುತ್ತಿದ್ದರು. ಇತ್ತೀಚೆಗೆ ಯುವತಿ ಆತನನ್ನು ಅವೈಡ್ ಮಾಡುತ್ತಿದ್ದಳಂತೆ. ಇದೇ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಫಯಾಜ್ ತಿಳಿಸಿದ್ದಾನೆ.
ನೇಹಾ ಕಾಲೇಜಿನಿಂದ ಹೊರಬರುತ್ತಿದ್ದಂತೆಯೇ ಆರೋಪಿ ಫಯಾಜ್ ಏಕಾಏಕಿ ಆಕೆಯ ಮೇಲೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಕೂಡಲೇ ಕಾಲೇಜಿನ ಆಡಳಿತ ಮಂಡಳಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾಳೆ.
ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ
ಕೋರ್ಟ್ ಆರೋಪಿ ಫಯಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ: ಕಮಿಷನರ್
ಹುಬ್ಬಳ್ಳಿ ನೇಹಾ ಹ* ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ರಿಯಾಕ್ಷನ್