Saturday, July 12, 2025

Latest Posts

ನೇಹಾ ಕೊ* ಪ್ರಕರಣ: ಆರೋಪಿ ಫಯಾಜ್‌ಗೆ DNA ಪರೀಕ್ಷೆ ಮಾಡಲು ಮುಂದಾದ CID

- Advertisement -

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಫಯಾಜ್‌ಗೆ ಡಿಎನ್‌ಎ ಪರೀಕ್ಷೆ ಮಾಡಲು ಸಿಐಡಿ ಮುಂದಾಗಿದೆ.

ಪರೀಕ್ಷೆ ಮಾಡಲು ಅನುಮತಿಗಾಗಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಅರ್ಜಿ ಸಿಲ್ಲಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಯಲಿದೆ. ಈ ಮೂಲಕ ನೇಹಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಕೆಲ ದಿನಗಳ ಹಿಂದೆ ಫಯಾಜ್ ನೇಹಾಳನ್ನು ಕಾಲೇಜು ಕ್ಯಾಂಪಸ್‌ನಲ್ಲೇ ಚಾಕು ಇರಿದು ಸಾಯಿಸಿದ್ದ. ಬಳಿಕ ಗೊತ್ತಾಗಿದ್ದೇನಂದ್ರೆ, ಫಯಾಜ್ ಮತ್ತು ನೇಹಾ ಪ್ರೀತಿ ಮಾಡುತ್ತಿದ್ದು, ಆಕೆ ಈತನನ್ನು ಕೆಲ ದಿನಗಳಿಂದ ಅವೈಡ್ ಮಾಡುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಫಯಾಜ್, 5 ದಿನಗಳ ಮುಂಚೆ ಚಾಕು ಖರೀದಿಸಿ, ಹುಬ್ಬಳ್ಳಿ ಇರಿಸಿದ್ದ. ಬಳಿಕ ಸವದತ್ತಿಯಿಂದ ಬಂದು ನೇಹಾಳನ್ನು ಕೊಂದು, ಬೈಕ್‌ನಲ್ಲಿ ಎಸ್ಕೇಪ್ ಆಗ ಹೊರಟಿದ್ದ. ಅದಕ್ಕಾಗಿ ಆತ ಕೊಲೆ ಮಾಡುವ ಮುನ್ನ ಬೈಕ್ ಕೀ ತೆಗಿಯದೇ ಗಾಡಿಯನ್ನು ಆನ್‌ ಮೋಡ್‌ನಲ್ಲೇ ಇರಿಸಿದ್ದ.

ಆದರೆ ಕೊಲೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದರೂ ಕೂಡ, ಪೊಲೀಸರು ಅವನನ್ನು 1 ಗಂಟೆಯೊಳಗೆ ಬಂಧಿಸಿದ್ದಾರೆ. ಆದೆ ನೇಹಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು.

ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..

ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ

- Advertisement -

Latest Posts

Don't Miss