ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಭಾನುವಾರ ರಾತ್ರಿ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದು, ಶಿವಕುಮಾರ್ ಅದನ್ನು ನಿರಾಕರಿಸಿದರು.
ಭಾನುವಾರ ರಾತ್ರಿ ಮೊದಲ ದಿನದ ಪಾದಯಾತ್ರೆ ಮುಗಿಸಿ ಡಿಕೆಶಿ ತಮ್ಮ ಊರಾದ ದೊಡ್ಡಾಲಹಳ್ಳಿಯಲ್ಲಿ ತಂಗಿದ್ದರು.ಈ ವೇಳೆ ಅಲ್ಲಿಗೆ ರಾಮನಗರ ಹೆಚ್ಚುವರಿ ಜವರೇಗೌಡ ನೇತೃತ್ವದ ಅಧಿಕಾರಿಗಳ ತಂಡವು ಅಲ್ಲಿಗೆ ಬಂದಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿತು.
ಆದರೆ ಇದನ್ನು ನಿರಾಕರಿಸಿದ ಡಿಕೆಶಿ, ನನಗೆ ಯಾವ ರೋಗ ಲಕ್ಷಣಗಳೂ ಇಲ್ಲ. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ , ತಿಹಾರ್ ಜೈಲ್ ನೋಡಿದಿನಿ, ರಾಮನಗರ ಜೈಲ್ನೂ ನೋಡೋಣ: ಕೋವಿಡ್ ಟೆಸ್ಟ್ ಮಾತ್ರ ಮಾಡಿಸಿಕೊಳ್ಳಲ್ಲ, ಎಂದು ಹೇಳಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ರೀತಿ ನಡುವಳಿಕೆಯನ್ನ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಂದ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಕಳುಹಿಸಿದ್ದು ಯಾರು? ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೋಗಿ ಆರೋಗ್ಯ ಸಚಿವರಿಗೆ ಹೇಳಿ ನನ್ನ ಹತ್ರ ಆಟ ಬೇಡ, ಯಾರಾದ್ರೂ ಬಚ್ಚಗಳತ್ರ ಆಟ ಆಡಲಿ. ವಿಮಾನ ನಿಲ್ದಾಣ ದಲ್ಲಿ ಬೇರೆ ಕಡೆಯಿಂದ ಬಂದ ಪ್ರಯಾಣಿಕರನನ್ನ ಟೆಸ್ಟ್ ಮಾಡಿಸಿ ಎಂದು ಕೆಂಡಾಮಂಡಲವಾದರು.