Spiritual: ನಮ್ಮ ಜೀವನದಲ್ಲಿ ನೆಮ್ಮದಿ ಇರಬೇಕು ಅಂದ್ರೆ, ನಾವು ನೆಲೆಸಿರುವ ಸ್ಥಳ ಸರಿಯಾಗಿ ಇರಬೇಕು. ಸುತ್ತಮುತ್ತಲೂ ಒಳ್ಳೆಯ ಜನರಿರಬೇಕು. ಆಗ ನಾವು ನೆಮ್ಮದಿಯಿಂದ ಬದುಕಬಹುದು. ಆದರೆ ನಾವು ಇರುವ ಸ್ಥಳ ಸರಿಯಾಗಿ ಇಲ್ಲ. ನಮ್ಮ ಸುತ್ತಮುತ್ತಲಿರುವವರು, ಕೆಟ್ಟ ಮನಸ್ಥಿತಿಯವರು, ಸ್ವಾರ್ಥಿಗಳಾಗಿದ್ದರೆ, ಅಂಥ ಸ್ಥಳ ನರಕಕ್ಕಿಂತ ಕಡೆಯಾಗಿರುತ್ತದೆ. ಹಾಗಾಗಿ ಚಾಣಕ್ಯರು, ಕೆಲವು ಸ್ಥಳದಲ್ಲಿ ನೆಲೆಸಬಾರದು ಎಂದು ಹೇಳಿದ್ದಾರೆ.
ಗೌರವವಿಲ್ಲದ ಸ್ಥಳದಲ್ಲಿ ನಿಲ್ಲಬಾರದು. ಮನೆಯಾಗಲಿ, ಕೆಲಸ ಮಾಡುವ ಸ್ಥಳವಿರಲಿ. ನಿಮಗೆ ಆ ಸ್ಥಳದಲ್ಲಿ ಗೌರವವಿಲ್ಲ ಅಂತಾದಲ್ಲಿ ಆ ಸ್ಥಳದಲ್ಲಿ ಎಂದಿಗೂ ನಿಲ್ಲಬಾರದು. ಅದಕ್ಕಾಗಿ ನಿಮಗೆ ಸ್ವಾಭಿಮಾನವಿರುವುದು ತುಂಬಾ ಮುಖ್ಯ. ಹಾಗಾಗಿ ಹಣದ ವಿಷಯದಲ್ಲಿ, ಕೆಲಸದ ವಿಷಯದಲ್ಲಿ ಗೌರವ ಸಿಗದಿದ್ದಲ್ಲಿ, ನೀವು ಅಂಥ ಸ್ಥಳದಲ್ಲಿ ಇರಬಾರದು ಅಂತಾರೆ ಚಾಣಕ್ಯರು.
ಉದ್ಯೋಗದ ಅವಕಾಶವೇ ಇರದ ಸ್ಥಳದಲ್ಲಿ ನಿಲ್ಲಬಾರದು. ಎಲ್ಲಿ ಉತ್ತಮವಾದ ಉದ್ಯೋಗ ಸಿಗುವುದಿಲ್ಲವೋ, ಅಲ್ಲಿ ನೆಲೆಸಲೇಬಾರದು ಅಂತಾರೆ ಚಾಣಕ್ಯರು. ಏಕೆಂದರೆ, ಉದ್ಯೋಗವಿಲ್ಲದಿದ್ದರೆ, ಬದುಕು ನಗರಕವಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಟ್ಟು, ನೆಮ್ಮದಿ ಹಾಳಾಗುತ್ತದೆ.
ಶಿಕ್ಷಣ ಸಿಗದ ಜಾಗದಲ್ಲಿ ಇರಬಾರದು. ಶಿಕ್ಷಣ ಅನ್ನೋದು ಎಷ್ಟು ಮುಖ್ಯ ಅನ್ನೋದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಿದ್ಯಾವಂತರೇ. ಆದರೆ, ವಿದ್ಯೆ ಇಲ್ಲದವರ ಜೊತೆ ಬದುಕಿದಾಗ ಮಾತ್ರ, ವಿದ್ಯೆ ಎಷ್ಟು ಮುಖ್ಯ ಅಂತ ಗೊತ್ತಾಗುತ್ತದೆ. ಏಕೆಂದರೆ, ವಿದ್ಯೆ ಇಲ್ಲದ ಹಲವರಿಗೆ ಹೇಗೆ ಬದುಕಬೇಕು ಎಂಬುದರ ಅರಿವೇ ಇರುವುದಿಲ್ಲ. ಅಲ್ಲದೇ, ಎಲ್ಲರೆದುರು ಹೇಗಿರಬೇಕು ಅಂತಲೂ ಗೊತ್ತಿರುವುದಿಲ್ಲ. ಶಿಕ್ಷಣವಿಲ್ಲದಿದ್ದರೆ, ಅಂಥವರು ಉತ್ತಮವಾಗಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚಾಣಕ್ಯರು ಉತ್ತಮ ಶಿಕ್ಷಣ ಸಿಗದ ಜಾಗದಲ್ಲಿ ಎಂದಿಗೂ ನಿಲ್ಲಬಾರದು ಎಂದು ಹೇಳುತ್ತಾರೆ.




