Spiritual: ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಹಾಗಾಗಿ ಮನುಷ್ಯ ತನ್ನ ಪ್ರೀತಿ ಪಾತ್ರರು, ಸ್ನೇಹಿತರು, ಸಂಬಂಧಿಕರಲ್ಲಿ ಕಷ್ಟವಿದೆ ಸಹಾಯ ಮಾಡಿ ಎಂದು ಕೇಳುತ್ತಾರೆ. ಆ ರೀತಿ ಸಹಾಯ ಕೇಳುವುದು ತಪ್ಪಲ್ಲ. ಆದರೆ, ಕೆಲವರ ಬಳಿ, ನಾವು ಸಾಯುವ ಪರಿಸ್ಥಿತಿ ಬಂದರೂ, ಸಹಾಯ ಕೇಳಬಾರದು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬರೀ ತಮ್ಮ ಸ್ವಾರ್ಥ ಬಯಸುವವರು. ಸ್ವಾರ್ಥ ಬಯಸುವವರು ಎಂದಿಗೂ ಕಾಳಜಿಯಿಂದ, ಪ್ರೀತಿಯಿಂದ ಸಹಾಯ ಮಾಡುವುದಿಲ್ಲ. ಅವರು ನಿಮ್ಮಿಂದ ಏನಾದರೂ ಕೆಲಸ ಮಾಡಿಸಿಕೊಳ್ಳಬೇಕು. ನಿಮಗೆ ದುಡ್ಡು ಕೊಟ್ಟ ಬಳಿಕ, ಅದನ್ನು ಪುನಃ ವಾಪಸ್ ಪಡೆಯುವವರೆಗೂ ನಿಮ್ಮಿಂದ ಲಾಭ ಪಡೆಯಬೇಕು ಅನ್ನೋ ಉದ್ದೇಶದಿಂದಲೇ, ನಿಮಗೆ ಸಹಾಯ ಮಾಡುತ್ತಾರೆ. ಹಾಗಾಗಿ ಇಂಥವರ ಬಲಿ ಸಹಾಯ, ಸಾಲ ಪಡೆಯಲೇಬಾರದು.
ಅಲ್ಲದೇ ನೀವು ಹಿಂದಿರುಗಿಸಿ ಕೊಡದ ರೀತಿಯಲ್ಲಿ ಅವರ ನಿಮಗೆ ಸಹಾಯ ಮಾಡಿದ್ದಲ್ಲಿ, ಕೊನೆಯ ತನಕವೂ ಅವರು ನಿಮಗೆ ತಾವು ಮಾಡಿದ ಸಹಾಯವನ್ನು ನೆನಪಿಸುತ್ತಲೇ, ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತಾರೆ. ಹಾಗಾಗಿ ಅಂಥವರ ಬಳಿ ಎಂದಿಗೂ ಸಹಾಯ ಪಡೆಯಬಾರದು.
ಹೀಯಾಳಿಸುವವರು. ಮಾತು ಮಾತಿಗೂ ಕೊಂಕು ಮಾತನಾಡುವವರ ಬಳಿ ಎಂದಿಗೂ ಸಹಾಯ ಕೇಳಲೇಬೇಡಿ. ಅವರು ಬೇರೆಯವರೇ ಆಗಿರಬಹುದು ಅಥವಾ ನಿಮ್ಮ ಸಂಬಂಧಿಕರೇ ಇರಬಹುದು. ಅಥವಾ ನಿಮ್ಮ ಮನೆಯಲ್ಲಿ ಇರುವವರೇ ಆಗಿರಬಹುದು. ಅವರ ಮಾತಿನಲ್ಲಿ ಬರೀ ಕೊಂಕು, ಹೀಯಾಳಿಸುವಿಕೆ ತುಂಬಿದ್ದರೆ, ಅಂಥವರ ಬಲಿ ಸಹಾಯ ಪಡೆಯಬೇಡಿ. ಏಕೆಂದರೆ, ಅಂಥವರು ಸಹಾಯ ಕೇಳಿದಾಗ, ಖಂಡಿತವಾಗಲೂ ಸಹಾಯ ಮಾಡುತ್ತಾರೆ. ಏಕೆಂದರೆ, ಬೇರೆ ಸಂದರ್ಭದಲ್ಲಿ ಆ ಸಹಾಯ ನೆನಪಿಸಿ, ನಿಮ್ಮನ್ನು ಕೀಳಾಗಿ ಕಾಣುವುದು ಅವರ ಉದ್ದೇಶವಾಗಿರುತ್ತದೆ. ಹಾಗಾಗಿ ಕಹಿ ಮಾತನಾಡುವವರ ಬಳಿ ಎಂದಿಗೂ ಸಹಾಯ ಪಡೆಯಬೇಡಿ.
ಆಸೆಬುರುಕರು. ನಿಮಗೆ ಸಹಾಯ ಮಾಡಿದವರು ಆಸೆಬರುಕರಾಗಿದ್ದರೆ. ಅಂಥವರು ನಿಮ್ಮಿಂದ ಬೇರೆ ರೀತಿಯ ಸಹಾಯ ಬಯಸುತ್ತಾರೆ. ನಿಮಗೆ 10 ರೂಪಾಯಿ ಸಹಾಯ ಮಾಡಿ, ನಿಮ್ಮಿಂದ 100 ರೂಪಾಯಿ ದೋಚುತ್ತಾರೆ. ಅವರ ಆ ದುರಾಸೆ ಈಡೇರದಿದ್ದಲ್ಲಿ, ನಿಮಗೆ ಅವರು ಅವಮಾನಿಸಬಹುದು. ಹಾಗಾಗಿ ಆಸೆ ಮಾಡುವವರ ಬಳಿ ಎಂದಿಗೂ ಸಹಾಯ ಕೇಳಬೇಡಿ.
ಪ್ರತಿದಿನ ಸ್ನಾನ ಮಾಡಲೇಬೇಕು ಎಂದು ಹಿಂದೂಗಳಲ್ಲಿ ನಿಯಮವಿರಲು ಕಾರಣವೇನು..?
ಶಿವನಿಗೆ ಏಕೆ ಮುಕ್ಕಣ್ಣನೆಂದು ಕರೆಯುತ್ತಾರೆ ಗೊತ್ತಾ..? ಇದರ ಹಿಂದಿರುವ ರಹಸ್ಯವೇನು..?