Wednesday, July 30, 2025

Latest Posts

ಬೂಟಿನಡಿ ಸಿಲುಕಿ 4 ದಿವಸದ ನವಜಾತ ಶಿಶು ಸಾವು..?

- Advertisement -

ರಾಂಚಿ: ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲೇ ನೆಲದ ಮೇಲೆ ಮಲಗಿಸಿದ್ದ 4 ದಿನದ ನವಜಾತ ಶಿಶು ಪೊಲೀಸರ ಬೂಟಿನಡಿ ಸಿಲುಕಿ, ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ದಿಯೋರಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಅರೆಸ್ಟ್ ಮಾಡಲು ಒಂದು ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರ ಬೂಟಿನಡಿ ಸಿಲುಕಿ 4 ದಿನದ ಗಂಡು ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.

ಈ ಮನೆಯಲ್ಲಿ ಇದ್ದ ಆರೋಪಿಗಳನ್ನು ಹಿಡಿಯಲು ಪೊಲೀಸರು ಬಂದಾಗ, ಮಗುವೊಂದನ್ನ ಮನೆಯಲ್ಲೇ ಬಿಟ್ಟು ಉಳಿದವರೆಲ್ಲ ಪೊಲೀಸರನ್ನು ಕಂಡು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೇಳೆ ದಾಳಿ ಮಾಡುವ ಭರದಲ್ಲಿ ಪೊಲೀಸರು ಕೆಳಗೆ ಮಲಗಿಸಿದ್ದ ಮಗುವನ್ನ ನೋಡದೇ, ಬೂಟಿನಿಂದ ತುಳಿದಿದ್ದು, ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಮಗುವಿನ ತಾಯಿ ನೇಹಾದೇವಿ, ನಮ್ಮ ಮನೆಯವರನ್ನ ಅರೆಸ್ಟ್ ಮಾಡಲು ಪೊಲೀಸರು ಬಂದಾಗ, ನಾವು ಮಗುವನ್ನು ಮೂಲೆಗೆ ಮಲಗಿಸಿ ಹೋಗಿದ್ದೆವು. ಆದ್ರೆ ನಾವು ಮನೆಗೆ ಬರುವುದರೊಳಗೆ ನನ್ನ 4 ದಿನದ ಗಂಡುಮಗುವನ್ನ ಪೊಲೀಸರು ತುಳಿದು ಸಾಯಿಸಿದ್ದಾರೆಂದು ನೇಹಾದೇವಿ ಆರೋಪಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಇನ್ನೂ ಆರೋಪ ಸಾಬೀತಾಗಲಿಲ್ಲ. ಆದ್ರೆ ಮಗು ಸಾವನ್ನಪ್ಪಿದ್ದು, ಬೂಟಿನಡಿ ಸಿಕ್ಕಿ ಎಂಬುದು ಸಾಬೀತಾದರೆ, ಖಂಡಿತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

 

‘ನನ್ನ ಬಗ್ಗೆ ಕೇಳಿದ್ರೆ ಹೇಳ್ತೀನಿ.. ಆದ್ರೆ ಈ ವಿಚಾರದ ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕ ವ್ಯಕ್ತಿ..’

ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬೀಳುತ್ತಿದ್ದವನನ್ನ ಕಾಪಾಡಿದ RPF : ವೀಡಿಯೋ ವೈರಲ್..

‘ಕಾಂಗ್ರೆಸ್ ಹೀನಾಯ‌ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು..’

- Advertisement -

Latest Posts

Don't Miss