- Advertisement -
ಹೊಸ ವರ್ಷಕ್ಕೆ ಉಡುಗೊರೆಯಾಗಿ ಮಹಿಳೆಯರಿಗೆ ಸರ್ಕಾರ ‘ಆಯುಷ್ಮತಿ’ ಹೆಸರಿನಲ್ಲಿ ಪ್ರತ್ಯೇಕ ಕ್ಲಿನಿಕ್ ತೆರೆಯಲು ನಿರ್ಧರಿಸಿದೆ. ಈ ಕ್ಲಿನಿಕ್ ನಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿ ಸೇರಿ ಎಲ್ಲರೂ ಮಹಿಳೆಯರೇ ಇರಲಿದ್ದಾರೆ. ‘ಆಯುಷ್ಮತಿ ಕ್ಲಿನಿಕ್’ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ನಮ್ಮ ಸರ್ಕಾರದ ಉಪಕ್ರಮ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ನಾಳೆ ಜನ ಸಂಕಲ್ಪ ಯಾತ್ರೆ
ಮಹಿಳೆಯರಿಗೋಸ್ಕರವೇ ಪ್ರತ್ಯೇಕವಾಗಿ ಈ ‘ಆಯುಷ್ಮತಿ ಕ್ಲಿನಿಕ್’ ತೆರೆಯಲು ಸರ್ಕಾರ ನಿರ್ಧರಿಸಿದ್ದು, ತಾಯಂದಿರು ಮತ್ತು ಶಿಶು ಮರಣ ತಪ್ಪಿಸಲು ‘ಆಯುಷ್ಮತಿ’ ಹೆಚ್ಚು ಸಹಕಾರಿಯಾಗಲಿವೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ಈ ಕ್ಲಿನಿಕ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
- Advertisement -