ಯಾವ ಮನೆಯಲ್ಲಿ ಪುಟ್ಟ ಮಕ್ಕಳು ಇರುತ್ತಾರೋ, ಆ ಮನೆ ಜನ ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ. ಯಾಕಂದ್ರೆ ಪುಟ್ಟ ಮಕ್ಕಳ ನಡೆ, ನುಡಿ ಎಲ್ಲವೂ ಚೆಂದವಾಗಿರತ್ತೆ. ಹಾಗಾಗಿ ಪ್ರತೀ ದಂಪತಿ, ಅಜ್ಜ ಅಜ್ಜಿಯರು ತಮ್ಮ ಮನೆಯಲ್ಲೊಂದು ಪುಟ್ಟ ಮಗು ಬೇಕು ಎಂದು ಬಯಸುತ್ತಾರೆ. ಪ್ರತಿ ದಂಪತಿಗೂ ತಾವು ಕೂಡ ಪೋಷಕರಾಗಬೇಕು. ತಮ್ಮ ಜೀವನದಲ್ಲೂ ಒಂದು ಪುಟ್ಟ ಕಂದನ ಆಗಮನವಾಗಬೇಕು ಅಂತಾ ಆಸೆ ಇರತ್ತೆ. ಆದ್ರೆ ಹಲವರಿಗೆ ಮಕ್ಕಳಾಗುವುದಿಲ್ಲ. ಹಾಗಾಗಿ ಇಂದು ನಾವು ನೀವು ತಂದೆ ತಾಯಿಯಾಗಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಅಂತಾ ಹೇಳಲಿದ್ದೇವೆ..
ಮೊದಲನೆಯ ಟಿಪ್ಸ್ ಅಂತಾ ಹೇಳಿದ್ರೆ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ, ರೆಸ್ಟ್ ತೆಗೆದುಕೊಳ್ಳುವುದಕ್ಕೆ, ಸಮಯ ಕಳೆಯುವುದಕ್ಕೆ ಬಿಡುವು ತೆಗೆದುಕೊಳ್ಳಿ. ಹೆಚ್ಚು ಸ್ಟ್ರೆಸ್ ತೆಗೆದುಕೊಳ್ಳುವ ಕೆಲಸವಿದ್ದಾಗಲೂ, ಬಂಜೆತನ ಬರುವ ಸಾಧ್ಯತೆ ಇರುತ್ತದೆ. ಯಾಕಂದ್ರೆ ಇಂಥ ವೇಳೆ ಸರಿಯಾಗಿ ಆಹಾರ ಸೇವಿಸಲು, ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಜಂಕ್ ಫುಡ್, ಅನ್‌ಹೆಲ್ದಿ ಫುಡ್ ಸೇವಿಸುವುದರಿಂದ ಬಂಜೆತನ ಉಂಟಾಗಬಹುದು.
ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..
ಹಾಗಾಗಿ ಆದಷ್ಟು ಮನೆಯೂಟವೇ ಸೇವಿಸಿ. ಹಣ್ಣು ಹಂಪಲು, ಫ್ರೆಶ್ ಜ್ಯೂಸ್, ಹಾಲು, ಮೊಸರು, ತುಪ್ಪ, ಬೆಣ್ಣೆ, ಡ್ರೈಫ್ರೂಟ್ಸ್ ಎಲ್ಲವನ್ನೂ ಮಿತವಾಗಿ ಸೇವಿಸಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ. ಮದ್ಯಪಾನ, ಧೂಮಪಾನ ಮಾಡುತ್ತಿದ್ದರೆ, ಸಂಪೂರ್ಣವಾಗಿ ಅದನ್ನ ತ್ಯಜಿಸಿ. ಹಸಿರು ತರಕಾರಿ, ಹಣ್ಣು ತಿನ್ನುವುದು ತುಂಬಾ ಮುಖ್ಯ. ಹೈಬ್ರೀಡ್ ತರಕಾರಿ ಹೆಚ್ಚು ತಿನ್ನಬೇಡಿ. ಹೈಬ್ರೀಡ್ ತರಕಾರಿಯನ್ನ ಎಷ್ಟು ಫಾಸ್ಟ್ ಆಗಿ ಬೆಳೆಸಿರುತ್ತಾರೋ, ಅಷ್ಟೇ ಫಾಸ್ಟ್ ಆಗಿ ಅದು ಆರೋಗ್ಯವನ್ನ ಹಾಳು ಮಾಡತ್ತೆ.
ಹಾಗಾಗಿ ಆದಷ್ಟು ಹೈಬ್ರೀಡ್ ತರಕಾರಿ ತಿನ್ನುವುದನ್ನು ಬಿಡಿ. ರಾಗಿ, ಕೆಂಪಕ್ಕಿ ಅನ್ನ, ಕುಚ್ಚಲಕ್ಕಿ ಅನ್ನ, ಗೋಧಿ, ಓಟ್ಸ್ ಇವನ್ನೆಲ್ಲ ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ಬಿಳಿ ಅನ್ನದ ಬದಲು, ಪ್ರತಿದಿನ ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಬಳಸಿ. ಹೆಚ್ಚು ಮೈದಾವನ್ನು ಬಳಸಬೇಡಿ. ಬೇಕರಿ ತಿಂಡಿ ತಿನ್ನಬೇಡಿ. ಎಳನೀರು, ಪಪ್ಪಾಯಿ ಹಣ್ಣು ತಿನ್ನಿ.
ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..
ಹೆಚ್ಚು ಮಾಂಸ ತಿನ್ನುವುದು, ಸರಿಯಾಗಿ ಬೇಯಿಸದ ಮಾಂಸ ಮೊಟ್ಟೆ ತಿನ್ನುವುದು, ಹೆಚ್ಚು ಕಾಫೀ ಕುಡಿಯುವುದು. ಮೈದಾ, ಸಕ್ಕರೆ, ಅನ್ನವನ್ನ ಪ್ರತಿದಿನ ಹೆಚ್ಚೆಚ್ಚು ಸೇವಿಸುವುದರಿಂದ ಪುರುಷತ್ವ ನಾಶವಾಗುತ್ತದೆ ಮತ್ತು ಬಂಜೆತನ ಬರುತ್ತದೆ ಎಂದು ಹೇಳಲಾಗಿದೆ. ಇನ್ನು ಮುಖ್ಯವಾದ ವಿಷಯ ಅಂದ್ರೆ ಹೆಚ್ಚು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಬಳಸುವುದರಿಂದ, ಮಕ್ಕಳಾಗುವುದಿಲ್ಲ ಎಂದು ಹೇಳಲಾಗಿದೆ.