Saturday, July 5, 2025

Latest Posts

ತನ್ನ ರಕ್ತದಿಂದ ದಿ ಕಶ್ಮೀರ್ ಫೈಲ್ಸ್ ಚಿತ್ರದ ಪೋಸ್ಟರ್ ಪೇಯ್ಟಿಂಗ್ ಮಾಡಿದ ಮಹಿಳೆ..

- Advertisement -

ಸಿನಿಮಾ ಬಗ್ಗೆ ಅದೆಂತೆಂಥ ಕ್ರೇಜ್ ಹೊಂದಿದ ವ್ಯಕ್ತಿಗಳಿರ್ತಾರೆ ಅನ್ನೋ ಬಗ್ಗೆ ಹಲವು ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಅವುಗಳ ಬಗ್ಗೆ ಕೇಳಿದ್ದೇವೆ. ತನ್ನ ನೆಚ್ಚಿನ ಹೀರೋ ಬರ್ತ್‌ಡೇಗೆ ವಿಶ್ ಮಾಡೋಕ್ಕೆ ಆಗಿಲ್ಲ ಅಂತಾ ಸುಟ್ಟುಕೊಂಡ ಅಭಿಮಾನಿ. ತನ್ನ ನೆಚ್ಚಿನ ನಟನ ಸಮಾಧಿ ನೋಡೋಕ್ಕೆ ಕಿಲೋ ಮೀಟರ್ ಗಟ್ಟಲೆ ನಡೆದು ಬಂದ ಅಭಿಮಾನಿ. ಹೀಗೆ ಸುಮಾರು ಘಟನೆಗಳು ನಡೆದಿರ್ತವೆ. ಇಂಥ ಘಟನೆಗಳ ಸಾಲಿಗೆ ಇನ್ನೊಂದು ಘಟನೆ ಸೇರಿದೆ.

ಅದೇನಂದ್ರೆ ಓರ್ವ ಮಹಿಳಾ ಅಭಿಮಾನಿ, ತನ್ನ ನೆಚ್ಚಿನ ಸಿನಿಮಾವಾದ ದಿ ಕಶ್ಮೀರ್ ಫೈಲ್ಸ್ ಪೋಸ್ಟರ್ ಪೇಯ್ಟಿಂಗ್ ಮಾಡಿದ್ದಾರೆ. ಇದರಲ್ಲೇನು ವಿಶೇಷ ಅಂದ್ರೆ, ಅವರು ಪೇಯ್ಟಿಂಗ್ ಮಾಡಿದ್ದು ಪೇಂಟ್‌ನಿಂದ ಅಲ್ಲ. ಬದಲಾಗಿ, ತಮ್ಮದೇ ರಕ್ತದಿಂದ. ಮಂಜು ಸೋನಿ ಎಂಬ ಮಹಿಳೆ, ತಮ್ಮ ದೇಹದಿಂದಲೇ 10 ಸತ ರಕ್ತ ತೆಗೆದು ಅದರಿಂದ ದಿ ಕಶ್ಮೀರ್ ಫೈಲ್ಸ್ ಚಿತ್ರದ ಪೋಸ್ಟರ್ ಪೇಂಟ್ ಮಾಡಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅದನ್ನ ಹರಿಬಿಟ್ಟಿದ್ದಾರೆ. ಇದನ್ನ ನೋಡಿರುವ ವಿವೇಕ್ ಅಗ್ನಿಹೋತ್ರಿ, ನಿಮಗೆ ಧನ್ಯವಾದಗಳು. ನಮ್ಮ ಚಿತ್ರದ ಮೇಲಿರುವ ನಿಮ್ಮ ಪ್ರೀತಿ ಕಾಳಜಿಗೆ ನಾನು ಸದಾ ಋಣಿ. ಆದರೆ ಹೀಗೆಲ್ಲ ಮಾಡಬೇಡಿ, ಎಂದು ಹೇಳಿದ್ದಾರೆ.

ದಿ ಕಶ್ಮೀರ್ ಫೈಲ್ಸ್ ಚಿತ್ರ ಯಾವ ರೇಂಜ್‌ಗೆ ಕ್ರೇಜ್ ಹುಟ್ಟುಹಾಕಿದೆ ಅಂದ್ರೆ, ಕೆಲವೇ ಕೆಲವು ದಿನಗಳಲ್ಲಿ 200 ಕೋಟಿ ಬಾಚಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳೆಲ್ಲ ಈ ಚಿತ್ರವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಕೂಡ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest Posts

Don't Miss