ಹಾಸನ :ವೀಲಿಂಗ್ ಮಾಡುವ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಮಾಹಿತಿ ನೀಡಿದ್ದಾರೆ.
ಮಾರ್ಚ್ 17ರಂದು ಗವೆನಹಳ್ಳಿಯ ಬೈಪಾಸ್ ಹತ್ತಿರ ವೀಲಿಂಗ್ ವಿಚಾರವಾಗಿ ಹೇಮಂತ್ ಎಂಬ ಯುವಕನ ಬರ್ಬರ ಹತ್ಯೆ ನಡೆದಿತ್ತು. ಹಾಸನ ನಗರದ 80 ಫೀಟ್ ರಸ್ತೆ ನಿವಾಸಿ ಸುಮಂತ್ (20) ಆಟೋ ಚಾಲಕನಾಗಿದ್ದು, ಬೈಕ್ ತೆಗೆದುಕೊಂಡು ನಗರದ ಗವೇನಹಳ್ಳಿ ಬಳಿ ವಿಲಿಂಗ್ ಮಾಡುತ್ತಿದ್ದ.
ಇದನ್ನು ಕಂಡ ಗವೇನಹಳ್ಳಿ ಗ್ರಾಮದ ಕೆಲ ಯುವಕರು ತಡೆದು ವಿಲಿಂಗ್ ಮಾಡದಂತೆ ಯವಕ ಸುಮಂತ್‌ಗೆ ಬುದ್ದಿ ಮಾತು ಹೇಳಿದ್ದರು. ಯುವಕರ ನಡುವೆ ಸಲ್ಪ ಮಾತುಕತೆ ನಡೆದಿತ್ತು. ಸ್ಥಳಿಯರು ಮಧ್ಯಪ್ರವೇಶ ಮಾಡಿ ಎರಡು ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಲಾಗಿತ್ತು. ಕೆಲ ಸಮಯದಲ್ಲಿಯೇ ಮತ್ತೆ ವಾಪಸ್ ತನ್ನ ಜೊತೆ ಸುಮಂತ್ ಇಬ್ಬರನ್ನು ಕರೆದುಕೊಂಡು ಬಂದಿದ್ದ. ಈ ವೇಳೆ ಕೈಲಿ ಲಾಂಗು, ಚಾಕು ತಂದು ತನ್ನ ವಿರುದ್ದ ಗಲಾಟೆ ಮಾಡಿದವರ ವಿರುದ್ದ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಈ ವೇಳೆ ಗವೇನಹಳ್ಳಿ ಗ್ರಾಮದ ಪ್ರಜ್ವಲ್ ಮತ್ತು ಇತರ ಯುವಕರು ಸೇರಿ ಆಟೋ ಚಾಲಕ ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಕೆಳಗೆ ಕುಸಿದು ಬಿದ್ದ ಸುಮಂತ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡಿದ್ದ ಸುಮಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಆರೋಪಿಗಳ ಪತ್ತೆಗೆ ಬಡಾವಣೆ ಠಾಣೆಯ ಪಿ ಐ ಸ್ವಾಮಿನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ರೋಹನ್ ಗೌಡ(24), ಪ್ರಜ್ವಲ್ ಜೆ ಎಸ್(23) ಪ್ರಜ್ವಲ್ ಸಿಎನ್(24) ಸುದರ್ಶನ್(25) ಎಂಬ ಆರೋಪಿಗಳನ್ನು ಸದ್ಯ ಬಂಧಿಸಲಾಗಿದೆ ಎಂದು ಎಸ್.ಬಿ.ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ನಿರ್ಮಲಾನಂದ ಸ್ವಾಮೀಜಿ ಭೇಟಿಯಾದ ಸಚಿವ ಮುನಿರತ್ನ: ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್…
‘ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚೆ ಮಾಡಿದ್ರೆ ಯಾರ ಹೊಟ್ಟೇನೂ ತುಂಬಲ್ಲ..’