Viral Video: ಸೀರೆ ಅಂಗಡಿಗೆ ಪಾಶ್ ಆಗಿ ಕಾರಲ್ಲಿ ಬಂದು 7 ಲಕ್ಷ ರೂಪಾಯಿ ಸೀರೆ ಕದ್ದ ಕಳ್ಳಿಯರು..

News: 6 ಹೆಂಗಸರು ಇನೋವಾ ಕಾರ್‌ನಲ್ಲಿ ಸೀರೆ ಅಂಗಡಿಗೆ ಬಂದು, ಗ್ರಾಹಕರ ರೀತಿ ವರ್ತಿಸಿ, ಸೀರೆ ಕದ್ದ ಘಟನೆ ಓರಿಸ್ಸಾದಲ್ಲಿ ನಡೆದಿದೆ.

ಓರಿಸ್ಸಾದ ಸೀರೆ ಅಂಗಡಿಗೆ ನುಗ್ಗಿ ಓರ್ವ ಪುರುಷ ಮತ್ತು 6 ಜನ ಮಹಿಳೆಯರು, ಸೀರೆ ನೋಡುವ ಗ್ರಾಹಕರ ಸೋಗಿನಲ್ಲಿ ಬಂದು, 7 ಲಕ್ಷ ಬೆಲೆ ಬಾಳುವ 25ಕ್ಕೂ ಹೆಚ್ಚು ಸೀರೆಗಳನ್ನು ಕದ್ದ“ಯ್ದಿದ್ದಾರೆ.

ಅವರು ಮಾಡಿರುವ ಈ ಕರ್ಮಕಾಂಡ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಸೀರೆ ನೋಡುವ ರೀತಿ ನಾಟಕವಾಡಿದರೆ, ಇನ್ನು ನಾಲ್ವರು ಮಹಿಳೆಯರು ಮತ್ತೆ ಬಂದು, ಕವರ್ ಆಗಿ ಸೀರೆ ಕದ್ದಿದ್ದಾರೆ. ಬೆಲೆ ಬಾಳುವ 4ರಿಂದ 5 ಸೀರೆಗಳನ್ನು ಒಬ್ಬೊಬ್ಬರಂತೆ ತಮ್ಮ ಸೀರೆಯಲ್ಲಿ ಅಡಗಿಸಿ, ಸೀರೆ ಕದ್ದು ಹೋಗಿದ್ದಾರೆ.

About The Author