Lucknow News: ಸದ್ಯ ಮದ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ಸಿಲೆಂಡರ್ ವ್ಯತ್ಯಯವಾಗಿದ್ದು, ಹಾರ್ಮೂಜ್ ಜಲಸಂಧಿಯಲ್ಲಿ ಬಂಧನವಾಗಿದ್ದ ಹಡಗುಗಳೆಲ್ಲ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಈ ಗ್ಯಾಸ್ ಸಿಲಿಂಡರ್ ಸಮಸ್ಯೆ ನಿಧಾನವಾಗಿ ಸರಿಯಾಗುತ್ತಿದೆ.
ಆದರೆ ಇದೇ ಸಮಸ್ಯೆಯ ಲಾಭ ಪಡೆಯಲು ಕೆಲವು ಕಿಡಿಗೇಡಿಗಳು ಜನರ ಜೀವನದ ಜತೆ ಆಟವಾಡುತ್ತಿದ್ದಾರೆ. ಲಖನೌನ ವಿಕಾಸ್ ನಗರದಲ್ಲಿ ಗ್ಯಾಸ್ ಡಿಲೆವರಿ ಮಾಡುವ ವ್ಯಕ್ತಿ ಗ್ಯಾಸ್ ಸಿಲಿಂಡರ್ನಲ್ಲಿ ನೀರು ತುಂಬಿಸಿ, ಮಾರಾಟ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಅಲ್ಲೇ ಸ್ಥಳದಲ್ಲೇ ಆತ ಕದ್ದು ಮುಚ್ಚಿ ಗ್ಯಾಸ್ ಸಿಲಿಂಡರ್ಗೆ ನೀರು ತುಂಬಿಸುತ್ತಿದ್ದ. ಯರಾದರೂ ತನ್ನನ್ನು ನೋಡುತ್ತಿದ್ದಾರೆಯೇ ಎಂದು ಪದೇ ಪದೇ ಚೆಕ್ ಮಾಡುತ್ತಿದ್ದ. ಇದನ್ನೆಲ್ಲ ಅಲ್ಲೇ ಇದ್ದ ಮನೆಯಲ್ಲಿದ್ದ ವ್ಯಕ್ತಿ ಕಿಟಕಿ ಮೂಲಕ ರೆಕಾರ್ಡ್ ಮಾಡಿದ್ದು, ಈ ವೀಡಿಯೋ ನೋಡಿ ಜನ ಆತಂಕಕ್ಕೀಡಾಗಿದ್ದಾರೆ.
ಇದು ಬರೀ ಹಣಕ್ಕಾಗಿ ಮೋಸ ಮಾಡುವ ಕೆಲಸವಲ್ಲ. ಬದಲಾಗಿ ಜನರ ಜೀವದ ಜತೆ ಆಟವಾಡುವ ಹೀನ ಮನಸ್ಥಿತಿ. ಇಂಥವರ ವಿರುದ್ಧ ಕ್ರಮ ಕೈಗ“ಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
🚨 Shocking viral video from Lucknow’s Vikas Nagar: Gas delivery boy caught filling an LPG cylinder with water near Gulachin Temple!
Tampering with cylinders like this is extremely dangerous and puts lives at risk.
This is not just cheating it’s playing with fire. Authorities… pic.twitter.com/uvgd3XUXsS— ಸನಾತನ (सनातन) (@sanatan_kannada) April 15, 2026




