ಕೋಲಾರ: ಚುನಾವಣಾ ಸಂದರ್ಭದಲ್ಲಿ ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕೀಯ ಮಾಡುವಂತದ್ದು ಯಾರಿಗೂ ಶೋಭೆ ತರುವಂತದ್ದಲ್ಲ. ಯಾರು ಯಾರೊ ಹೆಸರುಗಳನ್ನು ತಂದು ಚುನಾವಣಾ ಸಂದರ್ಭದಲ್ಲಿ ಜನರಿಗೆ ದಿಕ್ಕು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಕರ್ನಾಟಕ ರಾಜ್ಯದಲ್ಲಿ ಎಲ್ಲ ರೀತಿಯಾದ ಸಮುದಾಯಗಳು ಇವೆ ಇವರ ಉದ್ದೇಶಗಳು ಒಕ್ಕಲಿಗರ ಮತಗಳನ್ನು ಬೇರ್ಪಡಿಸುತ್ತವೆ ಎಂಬ ಭಾವನೆಯಿಂದ ಎಲ್ಲಾ ವಿಚಾರಗಳನ್ನು ಬಿಜೆಪಿ ಯವರು ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ ಇದೆಲ್ಲವೂ ತಾತ್ಕಾಲಿಕವಷ್ಟೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ .
ಕೋಲಾರ ಜಿಲ್ಲೆಯ ಬಂಗರಾಪೇಟೆ ತಾಲೂಕಿನಲ್ಲಿ ಜೆಡಿಎಸ್ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ರಾಜ್ಯಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಆಡಳಿತವನ್ನು ನಡೆಸಿ ಯಾವ ಯೋಜನೆಗಳನ್ನು ಕೊಟ್ಟಿದ್ದೆ ಅದರ ಬಗ್ಗೆ ಚರ್ಚೆ ಮಾಡಲಿ. ಅದು ಬಿಟ್ಟು ಉರೀಗೌಡ ನಂಜೇಗೌಡರ ಬಗ್ಗೆ ಚರ್ಚೆ ಮಾಡಿದರೆ ಯಾರ ಹೊಟ್ಟೆನು ತುಂಬುವುದಿಲ್ಲ ಎಂದಿದ್ದಾರೆ.
ಸಿದ್ದರಾಮಣ್ಣ ಈ ರಾಜ್ಯದ ಹಿರಿಯ ನಾಯಕರು ಅವರ ಲೆಕ್ಕಾಚಾರಗಳು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು. ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಸೂಕ್ತ ವ್ಯಕ್ತಿಯಲ್ಲ . ಶಿವರಾಮೆಗೌಡ ಜೆಡಿಎಸ್ ಗೆ ಬುದ್ದಿ ಕಲಿಸುತ್ತೇನೆ ಎಂಬ ವಿಷಯವಾಗಿ ಮಾತನಾಡಿ, ನಾಗಂಮಗಲ ವಿಧಾನಸಭಾ ಕ್ಷೇತ್ರ 2019 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಬಿಜೆಪಿ ರೈತ ಸಂಘ ಎಲ್ಲರು ನನ್ನ ವಿರುದ್ದ ತಿರುಗಿ ಬಿದ್ದಂತಹ ಸಂದರ್ಭದಲ್ಲಿ, ನಾಗಮಂಗಲ ಕ್ಷೇತ್ರದ ಜನರು 8000 ಮತಗಳ ಲೀಡ್ ನೀಡಿದಂತ ಕ್ಷೇತ್ರ ಅದು. ಯಾರು ಯಾರಿಗೆ ಬುದ್ದಿ ಕಲಿಸುತ್ತಾರೆ ಎಂಬುದು ನಾಗಮಂಗಲ ಜನತೆಗೆ ಬಿಟ್ಟಿದ್ದು . ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ಥಿತ್ವವೆ ಇಲ್ಲ . ಅದರಲ್ಲಿ ಡ್ಯಾಮೇಜ್ ಎಲ್ಲಿಂದ ಬರುತ್ತೆ..? ಹಾಗಾಗಿ ಅದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಮನೆಗೆ ಹೋಗಲು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರ.. ಯಾಕೆ ಗೊತ್ತಾ..?