ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧವಾದ ಕಬ್ಬಳಿ ಕ್ಷೇತ್ರವು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ ಕಡೆಗೆ ಹೆಚ್ಚು ಹೊತ್ತು ಕೊಟ್ಟು ಸಹಸ್ರಾರು ಭಕ್ತಾದಿಗಳನ್ನು ಧರ್ಮದ ಕಡೆ ಬರುವಂತೆ ಬಸವೇಶ್ವರ ಸ್ವಾಮಿಯವರೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಶ್ರೀಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರಿಸೇವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸತ್ಯಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಈಶ್ವರ ದೇವಸ್ಥಾನ, ಕಬ್ಬಳಿ ಬಸವೇಶ್ವರ, ಕಬ್ಬಳಿ ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಕಬ್ಬಳಿ ಬಸವೇಶ್ವರ ದೇವಸ್ಥಾನದ ಮೂಲ ಸ್ಥಾನದಲ್ಲಿ ಮೊದಲು ಪೂಜೆ ನೆರವೇರಿಸಿ ನಂತರ ಇತರ ದೇವಸ್ಥಾನದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!
ಕಬ್ಬಳಿ ಗ್ರಾಮದ ನೂತನ ದೇವಸ್ಥಾನದ ಕೆತ್ತನೆ ಕೆಲಸ ನಡೆಯುತ್ತಿದೆ. ಅತಿ ಶೀಘ್ರದಲ್ಲೇ ಬಸವೇಶ್ವರ ಸ್ವಾಮಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿ.ಎನ್.ಬಾಲಕೃಷ್ಣ ಮಾತನಾಡಿ ಈ ವರ್ಷ ಬಸವೇಶ್ವರ ಸ್ವಾಮಿಯವರ ಆಶೀರ್ವಾದದಿಂದ , ಪ್ರಕೃತಿಯ ಕೃಪೆಯಿಂದ ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ಮಳೆಯಿಂದ ತುಂಬಿರುವುದು ತುಂಬಾ ಸಂತೋಷದ ವಿಚಾರ ಎಂದು ತಿಳಿಸಿದರು.
ಮಧ್ಯವಯಸ್ಕರರಲ್ಲೂ ಕಂಡುಬರುವ ಹಿಮ್ಮಡಿ ನೋವು; ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು
ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಶ್ರೀಕ್ಷೇತ್ರ ಆದಿಚುಂಚನಗಿರಿಯ ಎರಡನೇ ಮಠವಾಗಿ ಕಬ್ಬಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಮನಸ್ಸು ಮಾಡಿರುವುದು ಭಕ್ತಾದಿಗಳಲ್ಲಿ ಹರ್ಷವನ್ನು ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಕಬ್ಬಳಿ ಶ್ರೀ ಕ್ಷೇತ್ರವು ರಾಜ್ಯದಲ್ಲಿ ಮಾದರಿ ಆಧ್ಯಾತ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡು,ಸರ್ವ ಭಕ್ತಾದಿಗಳಿಗೂ ದರ್ಶನ ಭಾಗ್ಯವನ್ನು ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಸನ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ,ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಪರಮ ಪೂಜ್ಯ ಸ್ವಾಮೀಜಿ ಅವರ ಆಪ್ತ ಸಹಾಯಕರಾದ ರತನ್, ಬಸವರಾಜು, ಸೇರಿದಂತೆ ಇತರರು ಹಾಜರಿದ್ದರು.

